ಕಣ್ಣೂರು: ಕೇರಳ ರಾಜ್ಯ ತನ್ನ 4ನೇ ವಿಮಾನನಿಲ್ದಾಣವನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ. ಕಣ್ಣೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದೆ. ಡಿಸೆಂಬರ್ 9ರಂದು ಇದು ಉದ್ಘಾಟನೆಗೊಳ್ಳುತ್ತಿದೆ.
ಸಂಪೂರ್ಣ ಗ್ರೀನ್ಫೀಲ್ಡ್ ಏರ್ಪೋರ್ಟ್ ಇದಾಗಿದ್ದು, 1 ಅಂತಾರಾಷ್ಟ್ರೀಯ ಹಾಗೂ 9 ದೇಶೀಯ ವಿಮಾನ ಸಂಸ್ಥೆಗಳು ಇಲ್ಲಿಂದ ಕಾರ್ಯಾಚರಿಸಲು ಆಸಕ್ತಿ ತೋರಿಸಿವೆ ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಹೇಳಿದ್ದಾರೆ.
ಈ ವಿಮಾನನಿಲ್ದಾಣದ ದೇಶದಲ್ಲೇ 5ನೇ ಅತೀ ಉದ್ದದ ರನ್ವೇಯನ್ನು ಹೊಂದಿದ್ದು, ಇದರ ಉದ್ದ 4 ಸಾವಿರ ಮೀಟರ್ ಇದೆ.
1 ತಿಂಗಳ ನಿರಂತರ ವಿಮಾನ ಮಾಪನಾಂಕ ನಿರ್ಣಯ ಹಾಗೂ ಲ್ಯಾಂಡಿಂಗ್ ಪರೀಕ್ಷೆಗಳ ಬಳಿಕ ಈ ವಿಮಾನನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರು ಲೈಸೆನ್ಸ್ನ್ನು ನೀಡಿದ್ದಾರೆ.
ಸದಾ ಹಿಂಸಾಚಾರಕ್ಕೆ ಸುದ್ದಿಯಾಗುವ ಕಣ್ಣೂರು, ಎಲ್ಲಾ ಕಹಿಯನ್ನು ಹಿಂದಿಕ್ಕಿ ಇನ್ನು ಮುಂದೆ ಅಂತಾರಾಷ್ಟ್ರೀಯ ವಿಮಾನಯಾನ ಭೂಪಟದಲ್ಲಿ ತನ್ನ ಹೊಸ ಛಾಪನ್ನು ಮೂಡಿಸುವ ಹಾದಿಯಲ್ಲಿದೆ.
source; Hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.