ಬಾಗಲಕೋಟೆ: ಕರ್ನಾಟಕ ಮೂಲದ 14 ವರ್ಷದ ಬಾಲಕಿಯೊಬ್ಬಳು ಆಸ್ಟ್ರೇಲಿಯಾದಲ್ಲಿ ಪೈಲೆಟ್ ಆಗಿ ಎಲ್ಲರು ನಿಬ್ಬೆರೆಗಾಗುವಂತೆ ಮಾಡಿದ್ದಾಳೆ. ಈ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಪ್ರೀತಿಕಾ ಗಾಣಿಗೇರ ಆಸ್ಟ್ರೇಲಿಯಾದಲ್ಲಿ ಪೈಲೆಟ್ ಆಗಿ ತರಬೇತಿ ಪಡೆದುಕೊಂಡಿರುವ ಕನ್ನಡತಿ. ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕುಂದರಗಿ ಗ್ರಾಮದವಳು. ಆದರೆ ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಿ. ಈಕೆಯ ತಂದೆ ವೆಂಕಟೇಶ್ ಗಾಣಿಗೇರ ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿ ಎಂಜಿನಿಯರ್ ಆಗಿದ್ದಾರೆ.
ಪ್ರೀತಿಕಾ ತನ್ನ 8ನೇ ವಯಸ್ಸಿನಿಂದಲೇ ಏರ್ ಲೀಗ್ ಪ್ರೈಮರಿ ಸ್ಕೂಲ್ ಆಫ್ ಏವಿಯೇಶನ್ ಶಾಲೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, 6 ವರ್ಷಗಳ ನಿರಂತರ ಪರಿಶ್ರಮದಿಂದ ಈಗ ಸಮರ್ಥವಾಗಿ ವಿಮಾನ ಹಾರಿಸಬಲ್ಲ ಪೈಲೆಟ್ ಆಗಿ ಹೊರಹೊಮ್ಮಿದ್ದಾಳೆ. ಸದ್ಯ ಆಕೆ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಇನ್ನು ಎರಡು ವರ್ಷದಲ್ಲಿ ಆಕೆಗೆ ಅಧಿಕೃತ ಪೈಲೆಟ್ ಲೈಸೆನ್ಸ್ನ್ನು ಆಸ್ಟ್ರೇಲಿಯಾ ಆಡಳಿತ ನೀಡಲಿದೆ. ಬಳಿಕ ಆಕೆ ಪೈಲೆಟ್ ಆಗಿ ವೃತ್ತಿ ಜೀವನ ಆರಂಭಿಸಬಹುದಾಗಿದೆ. ಆದರೆ ನಾಸಾದ ಏರೋನ್ಯಾಟಿಕಲ್ ವಿಭಾಗದಲ್ಲಿ ಕೆಲಸ ಮಾಡಬೇಕು ಎಂಬುದು ಆಕೆಯ ಕನಸಾಗಿದೆ.
ಪ್ರೀತಿಕಾ ಸಾಧನೆ ಬಾಗಲಕೋಟೆಯಲ್ಲಿರುವ ಆಕೆಯ ಕುಟುಂಬ ಸದಸ್ಯರಿಗೆ ಅತ್ಯಂತ ಸಂತೋಷವನ್ನು ತಂದಿದೆ. ಆಗಾಗ ತಂದೆ-ತಾಯಿ ಜೊತೆ ಇಲ್ಲಿಗೆ ಆಗಮಿಸುವ ಆಕೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದು ಅವರ ಆಶಯವಾಗಿದೆ.
source; Suvarnanews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.