ಮಹಿಳಾ ಸಿನಿಮಾ ನಿರ್ಮಾಪಕರಿಗೆ ಹೆಚ್ಚಿನ ಉತ್ತೇಜನ, ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಅಕಾಡಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್ ‘ಆಕ್ಷನ್: ದಿ ಅಕಾಡಮಿ ವುಮೆನ್ಸ್ ಇನಿಶಿಯೇಟಿವ್’ನ್ನು ಆರಂಭಿಸಿದೆ.
ಸಿನಿಮಾ ರಂಗದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಮ್ಮ ಐಡಿಯಾಗಳನ್ನು ಹಂಚಿಕೊಳ್ಳಲು, ಇತರರೊಂದಿಗೆ ಕನೆಕ್ಟ್ ಆಗಲು ಅವರಿಗೆ ಉತ್ತಮ ಅವಕಾಶವನ್ನು ಒದಗಿಸಲಿದೆ.
ಈ ಕಾರ್ಯಕ್ರಮದಡಿ ಮಹಿಳಾ ಚಿತ್ರ ನಿರ್ಮಾಪಕರಿಗೆ ಅಕಾಡಮಿ ಗೋಲ್ಡ್ ಫೆಲೋಶಿಪ್, ಅಕಾಡಮಿ ಡೈರೆಕ್ಟರಿ ಸಿಗಲಿದ್ದು, ವಾರ್ಷಿಕ ಕಾರ್ಯಕ್ರಮ ಜರುಗಲಿದೆ. ಅ.15ರಂದು ಲಂಡನ್ನಲ್ಲಿ ಮತ್ತು ಅ.30ರಂದು ಲಾಸ್ ಏಂಜಲೀಸ್ನಲ್ಲಿ ಕಾರ್ಯಕ್ರಮ ಜರುಗಲಿದೆ. ಈ ವೇಳೆ ಗೋಲ್ಡ್ ಫೆಲೋಶಿಪ್ಗೆ ಆಯ್ಕೆಯಾದ ಇಬ್ಬರ ಘೋಷಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.