ನವದೆಹಲಿ: ಭಾರತದೊಳಗೆ ನುಸುಳಿದ್ದ 7 ರೋಹಿಂಗ್ಯಾಗಳನ್ನು ಗುರುವಾರ ಭಾರತ ಮಯನ್ಮಾರ್ ಆಡಳಿತಕ್ಕೆ ಒಪ್ಪಿಸುತ್ತಿದೆ. ಸಿಲ್ಚರ್ ಡಿಟೆಂಶನ್ ಸೆಂಟರ್ನಲ್ಲಿದ್ದ ಇವರನ್ನು ಈಗಾಗಲೇ ಮಣಿಪುರದ ಇಂಫಾಲಕ್ಕೆ ಕರೆ ತರಲಾಗಿದೆ. ಅಲ್ಲಿಂದ ಮೊರೆಹ್ ಗಡಿ ಮೂಲಕ ಅವರನ್ನು ಮಯನ್ಮಾರ್ಗೆ ಹಸ್ತಾಂತರ ಮಾಡಲಾಗುತ್ತಿದೆ.
2017ರಲ್ಲಿ ಈ 7 ಮಂದಿ ರೋಹಿಂಗ್ಯಾಗಳನ್ನು ಬಂಧಿಸಲಾಗಿತ್ತು, ಅಸ್ಸಾಂನಲ್ಲಿನ ಸಿಲ್ಚರ್ ಡಿಟೆಂಶನ್ ಸೆಂಟರ್ನಲ್ಲಿ ಇವರನ್ನು ಇಡಲಾಗಿತ್ತು. ಇದೀಗ ಇವರ ಹಸ್ತಾಂತರಕ್ಕೆ ಪ್ರಯಾಣ ಅನುಮತಿ ಸಿಕ್ಕಿದ್ದು, ಮಣಿಪುರದಲ್ಲಿನ ಮೊರೆಹ್ ಗಡಿ ಮೂಲಕ ಹಸ್ತಾಂತರ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಟ್ಟು 6 ಡಿಟೆಂಶನ್ ಸೆಂಟರ್ಗಳಲ್ಲಿ 900 ಮಂದಿ ಇದ್ದು, ಇವರಲ್ಲಿ ಬಹುತೇಕರು ವಿದೇಶಿಗರಾಗಿದ್ದಾರೆ. ಇದೇ ಮೊದಲ ಬಾರಿಗೆ ಮಯನ್ಮಾರ್ನ ರೋಹಿಂಗ್ಯಾಗಳನ್ನು ಭಾರತದಿಂದ ಮಯನ್ಮಾರ್ಗೆ ಹಸ್ತಾಂತರ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.