ಪುದುಚೇರಿ: ಗಾಂಧಿ ಜಯಂತಿಯ ಹಿನ್ನಲೆಯಲ್ಲಿ ದೇಶವ್ಯಾಪಿಯಾಗಿ ಸ್ವಚ್ಚತಾ ಕಾರ್ಯಗಳು ನಡೆಯುತ್ತಿವೆ. ರಾಜಕಾರಣಿಗಳು, ಗಣ್ಯಾತೀಗಣ್ಯರು, ಜನಸಾಮಾನ್ಯರು ಎಲ್ಲರೂ ದೇಶವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಆದರೆ ಪುದುಚೇರಿ ಸಿಎಂ ಚರಂಡಿಗಿಳಿದು ನಡೆಸಿದ ಸ್ವಚ್ಛತಾ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.
ಉನ್ನತ ಹುದ್ದೆಯಲ್ಲಿದ್ದೇನೆ ಎಂಬುದನ್ನೂ ಮರೆತು ಪುದುಚೇರಿ ಸಿಎಂ ವಿ.ನಾರಾಯಣಸ್ವಾಮಿಯವರು ತಮ್ಮ ಪಂಚೆಯನ್ನು ಮೇಲೆತ್ತಿ ಕಟ್ಟಿ, ಕೈಯಲ್ಲಿ ಸಲಿಕೆಯನ್ನು ಹಿಡಿದು, ಚರಂಡಿಗೆ ಇಳಿದು ಅದರಲ್ಲಿದ್ದ ಕೊಳಚೆಯನ್ನು ತೆಗೆದಿದ್ದಾರೆ. ಅವರ ಕಾರ್ಯಕ್ಕೆ ಎಲ್ಲರಿಂದಲೂ ಪ್ರಶಂಸೆಗಳ ಸುರಿಮಳೆಯಾಗಿದೆ.
ಉನ್ನತ ಸ್ಥಾನದಲ್ಲಿರುವವನು ಇತರರಿಗೆ ಯಾವ ರೀತಿಯಲ್ಲಿ ಮಾದರಿಯಾಗಬೇಕು ಎಂಬುದನ್ನು ವಿ.ನಾರಾಯಣ ಸ್ವಾಮಿ ತೋರಿಸಿಕೊಟ್ಟಿದ್ದಾರೆ. ಪಕ್ಷಬೇಧ ಮರೆತು ಜನಸಾಮಾನ್ಯನಂತೆ ಸ್ವಚ್ಛತೆ ಮಾಡಿದರೆ ಮಾತ್ರ ನಮ್ಮ ದೇಶ ಸ್ವಚ್ಛವಾಗಬಲ್ಲದು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.