ಜೈಪುರ: ರಾಜಸ್ಥಾನದ ಈ ರೈತ ಪ್ರಧಾನಿ ನರೇಂದ್ರ ಮೋದಿಯವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು, 2012ರಲ್ಲಿ. ಆ ವೇಳೆ ಅವರು ಗುಜರಾತ್ ಸಿಎಂ ಆಗಿದ್ದರು. ಮೊನ್ನೆ ಆತ ರೆಕಾರ್ಡ್ ಮಾಡಿ ಕಳುಹಿಸಿಕೊಟ್ಟ ಸ್ವಚ್ಛ ಭಾರತದ ಬಗೆಗಿನ ಸಂದೇಶವನ್ನು ಮೋದಿ, ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ಲೇ ಮಾಡಿದ್ದಾರೆ.
ಶೈತಾನ್ ಸಿಂಗ್ ಅವರು ರೈತನಾಗಿದ್ದು, ದೃಷ್ಟಿ ದೋಷ ಹೊಂದಿದ್ದಾರೆ. ಆದರೂ ತಮ್ಮ ಗದ್ದೆಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ಅವರು ಕೃಷಿ ಕಾರ್ಯ ಮಾಡುತ್ತಿದ್ದಾರೆ. ಅಂಧರಿಗಾಗಿ ಇರುವ ಟಾಟಾ ಅಗ್ರಿಕಲ್ಚರ್ ಆಂಡ್ ರೂರಲ್ ಟ್ರೈನಿಂಗ್ನಲ್ಲಿ ಕಲಿತ ಇವರು, ಸದ್ಭಾವನ ಮಿಶನ್ನಡಿ 2012ರಲ್ಲಿ ಮೋದಿಯನ್ನೂ ಭೇಟಿಯಾಗಿದ್ದಾರೆ.
ದೃಷ್ಟಿ ದೋಷವುಳ್ಳವನಾಗಿ, ಬಯಲು ಶೌಚಕ್ಕೆ ಹೋಗಲು ಪಟ್ಟ ಪಡಿಪಾಟಲು ಮತ್ತು ಶೌಚಾಲಯ ನಿರ್ಮಾಣಕ್ಕಾಗಿ ಪಟ್ಟ ಕಷ್ಟಗಳನ್ನು ಅವರು ಹೇಳಿಕೊಂಡಿದ್ದಾರೆ.
‘ಸ್ವಚ್ಛ ಭಾರತ ಅಭಿಯಾನ ಅತ್ಯುತ್ತಮ ಯೋಜನೆಯಾಗಿದೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಶೌಚಾಲಯ ನಿರ್ಮಾಣ ಮಾಡಲು ಪ್ರೇರಣೆ ಸಿಕ್ಕಿತು. ಅಂಧನಾಗಿ ಬಯಲು ಶೌಚಕ್ಕೆ ಹೋಗಲು ಕಷ್ಟವಾಗುತ್ತಿತ್ತು’ ಎಂದು ಸಂದೇಶವನ್ನು ರೆಕಾರ್ಡ್ ಮಾಡಿ ಅವರು ಪ್ರಧಾನಿಗಳಿಗೆ ಕಳುಹಿಸಿಕೊಟ್ಟಿದ್ದರು. ಈ ಸಂದೇಶವನ್ನು ಮೋದಿ ಮನ್ ಕೀ ಬಾತ್ನಲ್ಲಿ ಓದಿದ್ದಾರೆ. ಇದು ಶೈತಾನ್ ಸಿಂಗ್ ಅತೀವ ಸಂತೋಷ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.