ನವದೆಹಲಿ: ಕೃಷಿ ತ್ಯಾಜ್ಯ, ಗೋವಿನ ಸಗಣಿ, ಪಾಲಿಕೆಗಳ ಘನ ತ್ಯಾಜ್ಯ ಮುಂತಾದುವುಗಳಿಂದ ಬಯೋಗ್ಯಾಸ್ ಉತ್ಪಾದನೆ ಮಾಡುವ 5 ಸಾವಿರ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ.
ಮುಂದಿನ ಐದು ವರ್ಷಗಳಲ್ಲಿ ರೂ 1.75 ಟ್ರಿಲಿಯನ್ ಹೂಡಿಕೆ ಮಾಡಿ 5 ಸಾವಿರ ಬಯೋಗ್ಯಾಸ್ ಘಟಕಗಳನ್ನು ದೇಶದಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ತೈಲ ಕಂಪನಿಗಳು ಈ ಬಯೋಗ್ಯಾಸ್ ಘಟಕಗಳಿಂದ ಇಂಧನವನ್ನು ಕೆಜಿಗೆ ರೂ.46 ನೀಡಿ ಖರೀದಿ ಮಾಡಲಿದೆ, ಇದರಿಂದ ತೈಲಕ್ಕಾಗಿ ಹೊರ ದೇಶಗಳಿಗೆ ಅವಲಂಬಿತವಾಗುವುದು ಕುಗ್ಗಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಶೇ.81ರಷ್ಟು ತೈಲಕ್ಕಾಗಿ ಭಾರತ ವಿರ್ದೇಶಗಳ ಮೇಲೆ ಅವಲಂಬಿತವಾಗಿದೆ, ಹೀಗಾಗಿ ಕೃಷಿ ತ್ಯಾಜ್ಯಾ, ಸೆಗಣಿ, ಘನತ್ಯಾಜ್ಯಗಳಿಂದ ಜೈವಿಕ ಇಂಧನವನ್ನು ತಯಾರಿಸುವುದು ಅವಲಂಬನೆಯನ್ನು ತಗ್ಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.