ನವದೆಹಲಿ: ಭಾರತೀಯ ಮೂಲದ ಅಮೆರಿಕನ್ ಪ್ರೊಫೆಸರ್ ಗೀತಾ ಗೋಪಿನಾಥ್ ಅವರು, ಇಂಟರ್ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್)ನ ಮುಖ್ಯ ಆರ್ಥಿಕತಜ್ಞೆಯಾಗಿ ನೇಮಕವಾಗಿದ್ದಾರೆ. ಪ್ರಸ್ತುತ ಇವರು, ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಇಂಟರ್ನ್ಯಾಷನಲ್ ಸ್ಟಡೀಸ್ನ ಜಾನ್ ಝ್ವನಸ್ಟ್ರ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಗೀತಾ ಗೋಪಿನಾಥ್ ಅವರು ಜಗತ್ತಿನ ಅಪ್ರತಿಮ ಆರ್ಥಿಕತಜ್ಞರಲ್ಲಿ ಒಬ್ಬರು, ಸಾಕಷ್ಟು ಶೈಕ್ಷಣಿಕ ಪರಿಣಿತಿ ಅವರಿಗಿದೆ, ಬೌದ್ಧಿಕ ನಾಯಕತ್ವದಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ, ಅಪಾರದ ಅಂತಾರಾಷ್ಟ್ರೀಯ ಅನುಭವ ಅವರಿಗಿದೆ’ ಎಂದು ಐಎಂಎಫ್ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಿನ್ ಲಗಾರ್ಡೆ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ಮತ್ತು ಮ್ಯಾಕ್ರೋಎಕನಾಮಿಕ್ಸ್ಗಳಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡಿರುವ ಗೀತಾ ಅವರು, ಐಎಂಎಫ್ನ ಎಕನಾಮಿಕ್ ಕೌನ್ಸಿಲರ್ ಮತ್ತು ರಿಸರ್ಚ್ ಡಿಪಾರ್ಟ್ಮೆಂಟ್ನ ನಿರ್ದೇಶಕರಾಗಿರಲಿದ್ದಾರೆ.
2014ರಲ್ಲಿ ಇವರು, ಐಎಂಎಫ್ನ 45 ವರ್ಷದೊಳಗಿನ ಟಾಪ್ 25 ಆರ್ಥಿಕತಜ್ಞರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಅಲ್ಲದೇ ಇವರಿಗೆ ಯಂಗ್ ಗ್ಲೋಬಲ್ ಲೀಡರ್ ಎಂಬ ಅವಾರ್ಡ್ನ್ನು 2011ರಲ್ಲಿ ವರ್ಲ್ಡ್ ಎಕನಾಮಿಕ್ ಫೋರಂ ನೀಡಿತ್ತು.
Source; Hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.