ನವದೆಹಲಿ: ಡಿಜಿಟಲೀಕರಣದಿಂದ ಅಸಾಧ್ಯವಾಗಿರುವುದೆಲ್ಲವೂ ಇಂದು ಸಾಧ್ಯವಾಗುತ್ತಿದೆ. ನವದೆಹಲಿಯಲ್ಲಿರುವ ನ್ಯಾಷನಲ್ ಗಾಂಧೀ ಮ್ಯೂಸಿಯಂನಲ್ಲಿ ಇನ್ನು ಮುಂದೆ ಗಾಂಧೀಜಿಯವರ ಹೃದಯ ಬಡಿತ ನಮಗೆ ಕೇಳಿಸಲಿದೆ.
ನಾಳೆ ಗಾಂಧೀ ಜಯಂತಿಯ ಪ್ರಯುಕ್ತ ಹೃದಯ ಶಬ್ದ ಕೇಳಿಸುವ ಡಿಜಿಟಲ್ ವ್ಯವಸ್ಥೆ ಉದ್ಘಾಟನೆಗೊಳ್ಳಲಿದೆ.
1934ರಲ್ಲಿ ತೆಗೆಯಲಾದ ಗಾಂಧೀಜಿಯವರ ಇ.ಸಿ.ಜಿ ವರದಿಯನ್ನು ಆಧರಿಸಿ ಹೃದಯದ ಬಡಿತವನ್ನು ತಯಾರು ಮಾಡಲಾಗಿದೆ ಎಂದು ಮ್ಯೂಸಿಯಂನ ನಿರ್ದೇಶಕ ಎ.ಅಣ್ಣಾಮಲೈ ಹೇಳಿದ್ದಾರೆ.
ಗಾಂಧೀಜಿಯವರು ಉಪವಾಸ ಹಮ್ಮಿಕೊಂಡಾಗ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿದ್ದರು, ಈ ವೇಳೆ ಡಾ.ಜೀವ್ ರಾಮ್ ಮೆಹ್ತಾ ಮತ್ತು ಡಾ.ಬಿಸಿ ರಾಯ್ ಅವರು ಅವರನ್ನು ತಪಾಸಣೆಗೊಳಪಡಿಸುತ್ತಿದ್ದರು. ಈ ವೇಳೆ ತೆಗೆದ ಇ.ಸಿ.ಜಿಯಾಗಿದೆ.
source; ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.