ನವದೆಹಲಿ: ನಾಪತ್ತೆಯಾದ, ಮನೆಬಿಟ್ಟು ಬಂದು ಮಕ್ಕಳಲ್ಲಿ ಹೆಚ್ಚಿನ ಮಕ್ಕಳು ರೈಲ್ವೇ ನಿಲ್ದಾಣ, ರೈಲುಗಳಲ್ಲಿ ಪತ್ತೆಯಾಗುತ್ತಾರೆ. ಇದೇ ರೀತಿ 2017ರ ಜನವರಿಯಿಂದ 2018ರ ಆಗಸ್ಟ್ವರೆಗೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಪ್ರತಿನಿತ್ಯ ಸುಮಾರು 30 ಮಕ್ಕಳನ್ನು ರಕ್ಷಣೆ ಮಾಡಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, 2017ರ ಜನವರಿಯಿಂದ ಸುಮಾರು 20 ತಿಂಗಳ ಅವಧಿಯಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಸುಮಾರು 20 ಸಾವಿರ ಮಕ್ಕಳನ್ನು ರಕ್ಷಣೆ ಮಾಡಿದೆ. 2014, 2015 ಮತ್ತು 2016ರ ಮೂರು ವರ್ಷದಲ್ಲಿ ಸುಮಾರು 20 ಸಾವಿರ ಮಕ್ಕಳನ್ನು ಮನೆಗೆ ಕಳುಹಿಸಿಕೊಡಲಾಗಿದೆ.
2017ರಲ್ಲಿ ರಕ್ಷಣೆ ಮಾಡಲಾದ 11,178 ಮಕ್ಕಳಲ್ಲಿ 8,963 ಮಕ್ಕಳನ್ನು ಎನ್ಜಿಓಗಳ ಸಹಾಯದಿಂದ ಹೆತ್ತವರಿಗೆ ನೀಡಲಾಗಿದೆ. 2018ರ ಆಗಸ್ಟ್ವರೆಗೆ ಸುಮಾರು 20 ಸಾವಿರ ಮಕ್ಕಳನ್ನು ಹೆತ್ತವರಿಗೆ ನೀಡಲಾಗಿದೆ. ನಿತ್ಯ ಸುಮಾರು 30 ಮಕ್ಕಳನ್ನು ದೇಶದಾದ್ಯಂತದ ರೈಲ್ವೇ ನಿಲ್ದಾಣಗಳಿಂದ ರಕ್ಷಣೆ ಮಾಡಲಾಗುತ್ತಿದೆ.
source: hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.