ವಿಶ್ವಸಂಸ್ಥೆ: ಹವಮಾನ ವೈಪರೀತ್ಯ ತಡೆಗಟ್ಟುವ ಕಾರ್ಯದ ನೇತೃತ್ವವನ್ನು ವಹಿಸಲು ತಾನು ಬಯಸುತ್ತಿರುವುದಾಗಿ ವಿಶ್ವಸಂಸ್ಥೆಗೆ ಭಾರತ ಹೇಳಿದ್ದು, ತನ್ನ ಇತಿಹಾಸ, ಮೌಲ್ಯ ಮತ್ತು ಪ್ರಸ್ತುತ ಯೋಜನೆ, ದೂರದೃಷ್ಟಿಗಳಲ್ಲೂ ಪರಿಸರ ಸಂರಕ್ಷಣೆಯ ಬದ್ಧತೆ ಇದೆ ಎಂದು ಪ್ರತಿಪಾದಿಸಿದೆ.
ವಿಶ್ವಸಂಸ್ಥೆ ಹವಮಾನ ವೈಪರೀತ್ಯ ಬಗೆಗಿನ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಹವಮಾನ ಕಾರ್ಯಗಳಲ್ಲಿ ನೇತೃತ್ವವನ್ನು ವಹಿಸಲು ಭಾರತ ಬಯಸಿದೆ ಎಂದಿದ್ದಾರೆ.
ಭಾರತ 6ನೇ ಅತಿದೊಡ್ಡ ನವೀಕರಿಸಬಹುದಾದ ಶಕ್ತಿಯ ಉತ್ಪಾದಕ, 5ನೇ ಅತೀದೊಡ್ಡ ಸೌರಶಕ್ತಿ ಉತ್ಪಾದಕ, ಇದು ಭಾರತದ ಬದ್ಧತೆಗೆ ಉದಾಹರಣೆಯಾಗಿದೆ ಎಂದಿರುವ ಸುಷ್ಮಾ, 2020ರ ವೇಳೆಗೆ 170 ಗಿಗಾವ್ಯಾಟ್ ಸೋಲಾರ್ ಮತ್ತು ವಿಂಡ್ನ್ನು ಉತ್ಪಾದನೆ ಮಾಡುವ ಸರ್ಕಾರ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ.
‘ಭಾರತ ಸುಮಾರು 300 ಮಿಲಿಯನ್ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿದೆ, ಇದರಿಂದ ಯುಎಸ್ಡಿ 2 ಬಿಲಿಯನ್ ಮತ್ತು 4 ಗಿಗಾವ್ಯಾಟ್ ವಿದ್ಯುತ್ ಉಳಿತಾಯವಾಗಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.