ನವದೆಹಲಿ: ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಶಹೀದ್ ಭಗತ್ ಸಿಂಗ್ ಅವರ 111ನೇ ಜನ್ಮದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಾನ್ ನಾಯಕನಿಗೆ ನಮನಗಳನ್ನು ಸಲ್ಲಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ‘ಶಹೀದ್ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿಯಾಗಿದೆ, ಜಯಂತಿಯ ಅಂಗವಾಗಿ ಭಾರತಾಂಬೆಯ ಹೆಮ್ಮೆಯ ಪುತ್ರನಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಭಾರತೀಯ ಸ್ವಾತಂತ್ರ್ಯ ಚಳುವಳಿಕೆ ಅವರು ನೀಡಿದ ವೀರೋಚಿತ ಕೊಡುಗೆಯನ್ನು ಸ್ಮರಣೆ ಮಾಡುತ್ತಿರುವ ಭಾರತೀಯರನ್ನು ನಾನೂ ಸೇರಿಕೊಳ್ಳುತ್ತೇನೆ’ ಎಂದಿದ್ದಾರೆ.
1907ರ ಸೆ.28ರಂದು ಭಗತ್ ಸಿಂಗ್ ಅವರು ಈಗಿನ ಪಾಕಿಸ್ಥಾನದಲ್ಲಿರುವ ಪಂಜಾಬ್ ಪ್ರಾಂತ್ಯದ ಫೈಝಲ್ಬಾದ್ ಜಿಲ್ಲೆಯ ಬಂಗಾ ಗ್ರಾಮದಲ್ಲಿ ಜನಿಸಿದರು. ಎಳೆಯ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಅಪ್ರತಿಮ ತ್ಯಾಗ ಮಾಡಿದ ಇವರು ಇಂದಿಗೂ ಭಾರತೀಯ ಯುವ ಜನಾಂಗದ ಪ್ರೇರಣಾಶೀಲ ಶಕ್ತಿಯಾಗಿದ್ದಾರೆ.
Source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.