ನವದೆಹಲಿ: ವಿಶ್ವದ ಅತ್ಯುತ್ತಮ ಯೂನಿವರ್ಸಿಟಿಗಳ ಪೈಕಿ ಭಾರತದ 49 ಯೂನಿವರ್ಸಿಟಿಗಳು ಸ್ಥಾನವನ್ನು ಪಡೆದುಕೊಂಡಿದೆ. ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ 2019ರಲ್ಲಿ, ಭಾರತೀಯ ಯೂನಿವರ್ಸಿಟಿಗಳ ಪೈಕಿ ಐಐಎಸ್ ಬೆಂಗಳೂರು ಟಾಪ್ ಸ್ಥಾನ ಪಡೆದುಕೊಂಡಿದೆ.
ಹೊಸದಾಗಿ ನಿರ್ಮಾಣವಾಗಿರುವ ಐಐಟಿ ಇಂಧೋರ್ ಕೂಡ ಗ್ಲೋಬಲ್ ರ್ಯಾಂಕಿಂಗ್ನಲ್ಲಿ ಉತ್ತಮ ಸಾಧನೆ ಮಾಡಿದೆ. ಐಐಎಸ್ 250-200 ರ್ಯಾಂಕಿಂಗ್ ಗಡಿಯಲ್ಲಿ ಸ್ಥಾನ ಪಡೆದುಕೊಂಡರೆ, ಐಐಟಿ ಇಂಧೋರ್ 351-400ರ ನಡುವೆ ರ್ಯಾಂಕಿಂಗ್ ಪಡೆದುಕೊಂಡಿದೆ.
ಐಐಟಿ ದಿಲ್ಲಿ, ಐಐಟಿ ಬಾಂಬೆ, ಐಐಟಿ ರೂಕ್ರಿ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಕಳೆದ ಬಾರಿ ಭಾರತದ 42 ಯೂನಿವರ್ಸಿಟಿಗಳು ಈ ಪಟ್ಟಿಯಲ್ಲಿದ್ದು, ಈ ಬಾರಿ 49 ಯೂನಿವರ್ಸಿಟಿಗಳು ಸ್ಥಾನ ಪಡೆದುಕೊಂಡಿವೆ. ವಿಶ್ವದಲ್ಲೇ 5ನೇ ಅತ್ಯುತ್ತಮ ಪ್ರದರ್ಶನ ನೀಡಿದ ರಾಷ್ಟ್ರ ಎನಿಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.