ನ್ಯೂಯಾರ್ಕ್: ಇತ್ತೀಚಿಗಷ್ಟೇ ಅಮೆರಿಕ ಜನರಲ್ ಸರ್ಜನ್ ಆಗಿ ನೇಮಕವಾದ ಭಾರತೀಯ ಮೂಲದ ವೈದ್ಯ ವಿವೇಕ್ ಎಚ್ ಮೂರ್ತಿ ಅವರು 2014ನೇ ಸಾಲಿನ ‘ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಶುಕ್ರವಾರ ನ್ಯೂಯಾರ್ಕಿನ ಅಮೆರಿಕನ್ ಇಂಡಿಯನ್ ನ್ಯಾಷನಲ್ ಮ್ಯೂಸಿಯಂನಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅಲ್ಲದೇ 7 ವಿವಿಧ ರೀತಿಯ 14ಸಾಧಕರಿಗೆ ಗೌರವಿಸಲಾಯಿತು.
ವಿವೇಕ್ ಅವರು ಅಮೆರಿಕದ ಜನರಲ್ ಸರ್ಜನ್ ಆದ ಭಾರತೀಯ ಮೂಲದ ಮೊದಲ ವ್ಯಕ್ತಿ ಮತ್ತು ಅತಿ ಕಿರಿಯ ವ್ಯಕ್ತಿಯಾಗಿದ್ದಾರೆ.
2013ರಲ್ಲಿ ‘ಇಂಡಿಯಾ ಅಬ್ರಾಡ್ ಪರ್ಸನ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದ ನ್ಯಾಯಾಧೀಶ ಶ್ರೀ ಶ್ರೀನಿವಾಸನ್ ಅವರು ವಿವೇಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಫೀಲ್ಡ್ ಮೆಡಲ್ ಗೆದ್ದ ಮಂಜುಳ್ ಭಾರ್ಗವ್, ಪುಲಿಗ್ಜರ್ ಪ್ರಶಸ್ತಿ ವಿಜೇತ ಪ್ರೀತ್ ಶೇಷಾದ್ರಿ, ಗಣಿತತಜ್ಞ ಅಜಿತ್ ಬಾಲಕೃಷ್ಣನ್, ಎಬೋಲಾ ಹೋರಾಟಗಾರರಾದ ಡಾ.ಪ್ರಣವ್ ಶೆಟ್ಟಿ, ಡಾ.ಜಯ್ ವರ್ಮಾ, ಸಾಫ್ಟ್ವೇರ್ ಉದ್ಯಮಿ ವಿವೇಕ್ ರಾನಡಿವೆ ಅವರಿಗೆ ವಿವಿಧ ಕೆಟಗರಿಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.