ಬೆಂಗಳೂರು: ಎಲ್ಲಾ ಸಾಧಕರ ಸಾಧನೆಯ ಹಿಂದೆ ಹೆತ್ತವರ ಅಗಾಧ ತ್ಯಾಗ ಇರುತ್ತದೆ. ಮಕ್ಕಳನ್ನು ಬೆಳೆಸಿ, ಓದಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಲು ತಂದೆ ತಾಯಿ ಇಬ್ಬರೂ ಬೆವರು ಸುರಿಸುತ್ತಾರೆ. ಅವರ ತ್ಯಾಗವನ್ನು ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳಬೇಕಾಗಿದ್ದು ಮಕ್ಕಳ ಕರ್ತವ್ಯವಾಗಿರುತ್ತದೆ.
ಕರ್ನಾಟಕ ಯುವ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಾಯಿಯ ಕಾಲಿಗೆರಗಿ ನಮಸ್ಕರಿಸುತ್ತಿರುವ ದೃಶ್ಯ ಈಗ ವೈರಲ್ ಆಗಿದೆ. ಈ ಫೋಟೋ ಹಲವರನ್ನು ಭಾವುಕರನ್ನಾಗಿಸಿದೆ.
ಕರ್ನಾಟಕ ರಾಜ್ಯ ಮೀಸಲು ಪಡೆಯ ಎಡಿಜಿಪಿಯಾಗಿರುವ ಐಪಿಎಸ್ ಭಾಸ್ಕರ್ ರಾವ್ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ತಾಯಿಗೆ ನಮಸ್ಕರಿಸುತ್ತಿರುವ ವ್ಯಕ್ತಿ ಸಬ್ ಇನ್ಸ್ಪೆಕ್ಟರ್ ಎಂದಿದ್ದಾರೆ.
ಅವರ ತಾಯಿ ಪಾಸಿಂಗ್ ಔಟ್ ಪರೇಡ್ಗೆ ಬಂದಿರಲಿಲ್ಲ, ಈ ಕಾರಣಕ್ಕೆ ಅವರೇ ಆಕೆಯ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡಿದ್ದಾರೆ ಎಂದು ರಾವ್ ಬರೆದುಕೊಂಡಿದ್ದಾರೆ. ಈ ಟ್ವಿಟ್ಗೆ 1700ಕ್ಕೂ ಅಧಿಕ ಲೈಕ್ಸ್ ಬಂದಿದೆ.
A grateful son(Police Sub-inspector) in Reverence and Gratitude to his Single Mother who could not attend his Passing out Parade….Karnataka pic.twitter.com/VRIKSekgxb
— Bhaskar Rao IPS (@deepolice12) September 23, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.