ನವದೆಹಲಿ: ಭಾರತೀಯ ವೈದ್ಯಕೀಯ ಮಂಡಳಿ(ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅನುಮೋದನೆಯನ್ನು ನೀಡಿದ್ದು, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾವನ್ನು ಇದು ಸೂಪರ್ಸೀಡ್ ಮಾಡಲಿದೆ. ಈ ಮೂಲಕ ದೇಶದ ವೈದ್ಯಕೀಯ ಶಿಕ್ಷಣವನ್ನು ಬಲಿಷ್ಠಗೊಳಿಸಲು ಅನುವು ಮಾಡಿಕೊಡಲಿದೆ.
ಅಲ್ಲದೇ ‘ಬೋರ್ಡ್ ಆಫ್ ಗವರ್ನರ್ಸ್’ನ ರಚನೆಗೂ ಈ ಸುಗ್ರೀವಾಜ್ಞೆ ಅನುವು ಮಾಡಿಕೊಡಲಿದೆ. ವೈದ್ಯಕೀಯ ಶಿಕ್ಷಣದಲ್ಲಿ ಅಗತ್ಯ ಎನಿಸಿರುವ ಸುಧಾರಣೆಗಳನ್ನು ತರಲು, ದೂರ ಪ್ರದೇಶಗಳಿಗೂ ವೈದ್ಯಕೀಯ ಶಿಕ್ಷಣ ವಿಸ್ತರಿಸುವ ಟಾಸ್ಕ್ನ್ನು ‘ಬೋರ್ಡ್ ಆಫ್ ಗವರ್ನರ್ಸ್’ಗೆ ನೀಡಲಾಗುತ್ತದೆ.
ಸುಗ್ರೀವಾಜ್ಞೆಗೆ ಅನುಮೋದನೆ ನೀಡಿರುವ ರಾಷ್ಟ್ರಪತಿಗಳಿಗೆ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಅಭಿನಂದನೆಗಳನ್ನು ತಿಳಿಸಿದ್ದು, ಇದರಿಂದಾಗಿ ದೇಶದ ವೈದ್ಯಕೀಯ ಸೇವೆ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯಿಸಿದ್ದಾರೆ.
Source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.