ನವದೆಹಲಿ: ರಫೆಲ್ ಒಪ್ಪಂದವನ್ನು ಒಂದು ಹಗರಣ ಎಂದು ಸಾಬೀತುಪಡಿಸಲು ಹರ ಸಾಹಸಪಡುತ್ತಿರುವ ಕಾಂಗ್ರೆಸ್, ದೇಶದ ಪ್ರಧಾನಿಯನ್ನು ಕಳ್ಳ ಎಂದು ಕರೆಯುತ್ತಿದೆ. ಅದರ ಅಧ್ಯಕ್ಷ ರಾಹುಲ್ ಗಾಂಧಿ ಆರಂಭಿಸಿದ ‘ಕಳ್ಳ’ ಅಭಿಯಾನವನ್ನು ಅವರ ಹಿಂಬಾಲಕರೂ ಮುಂದುವರೆಸಿದ್ದಾರೆ.
ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆಯಾಗಿರುವ ರಮ್ಯಾ ಕೂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವಿಟರ್ನಲ್ಲಿ ‘ಕಳ್ಳ’ ಎಂದು ಜರೆದಿದ್ದಾರೆ. ಇದೇ ಕಾರಣಕ್ಕೆ ಅವರ ವಿರುದ್ಧ ’ಎಫ್ಐಆರ್’ ದಾಖಲಾಗಿದೆ.
ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸೈಯದ್ ರಿಝ್ವಾನ್ ಅಹ್ಮದ್ ಎಂಬುವವರು ರಮ್ಯಾ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಇದಕ್ಕೂ ಮುನ್ನ ಇಂತಹ ಟ್ವಿಟ್ನ್ನು ಮಾಡಬೇಡಿ, ದಯಮಾಡಿ ಇದನ್ನು ಟ್ವಿಟರ್ನಿಂದ ತೆಗೆದು ಹಾಕಿ ಎಂದು ಅವರು ರಮ್ಯಾ ಬಳಿ ಕೋರಿದ್ದರು. ಆದರೆ ಆಕೆ ಗಣನೆಗೆ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಐಪಿಸಿ ಸೆಕ್ಷನ್ 124ಎ ಅನ್ವಯ ದೂರು ದಾಖಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.