ನವದೆಹಲಿ: ದೇಶದ ಜನರಿಗೆ ಹಣಕಾಸು ಸೇವೆಗಳನ್ನು ಸುಲಭವಾಗಿ ಲಭ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ವಿತ್ತ ಸಚಿವಾಲಯ, ‘ಜನ್ ಧನ್ ದರ್ಶಕ್’ ಎಂಬ ನೂತನ ಮೊಬೈಲ್ ಅಪ್ಲಿಕೇಶನನ್ನು ಆರಂಭಿಸಿದೆ.
ಫಿನಾನ್ಶಿಯಲ್ ಇನ್ಕ್ಲೂಶನ್(ಹಣಕಾಸು ಒಳಗೂಡಿಸುವಿಕೆ) ಕಾರ್ಯಕ್ರಮದ ಭಾಗವಾಗಿ ಈ ಆ್ಯಪ್ ನ್ನು ಆರಂಭಿಸಲಾಗಿದ್ದು, ಟಚ್ ಪಾಯಿಂಟ್ನಲ್ಲಿ ದೇಶದ ನಿರ್ದಿಷ್ಟ ಜಾಗದಲ್ಲಿನ ಹಣಕಾಸು ಸೇವೆಯನ್ನು ಸಾಮಾನ್ಯ ಜನರಿಗೆ ಗುರುತಿಸಿಕೊಡುವಲ್ಲಿ ಈ ಆ್ಯಪ್ ಗೈಡಿಂಗ್ ಏಜೆಂಟ್ ರೀತಿ ಕಾರ್ಯನಿರ್ವಹಿಸಲಿದೆ.
ಈ ಆ್ಯಪ್ ನಲ್ಲಿ ಸುಮಾರು 5 ಲಕ್ಷ ಫಿನಾನ್ಶಿಯಲ್ ಇನ್ಕ್ಲೂಶನ್(ಬ್ಯಾಂಕ್ ಬ್ರಾಂಚ್, ಎಟಿಎಂ, ಪೋಸ್ಟ್ ಆಫೀಸ್)ಗಳ ಮ್ಯಾಪ್ಗಳು ಇದ್ದು, ಸುಮಾರು 1.35 ಲಕ್ಷ ಬ್ಯಾಂಕ್ ಮಿತ್ರಾಗಳು ಡಿಸೆಂಬರ್ 1ರ ವೇಳೆಗೆ ಈ ಆ್ಯಪ್ಗೆ ಸೇರ್ಪಡೆಯಾಗಲಿವೆ.
ಈ ಆ್ಯಪ್ನಲ್ಲಿ ಬ್ಯಾಂಕ್ ಬ್ರಾಂಚ್ಗಳ ಫೋನ್ ನಂಬರ್ಗಳೂ ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.