ನವದೆಹಲಿ: ಭಾರತೀಯ ಸೈನಿಕರ ಮೇಲೆ ಗೂಬೆ ಕೂರಿಸಲು ಸದಾ ಸನ್ನದ್ಧರಾಗಿರುವ ಪಾಕಿಸ್ಥಾನಿಯರು, ಈಗಾಗಲೇ ಹಲವಾರು ಬಾರಿ ತಮ್ಮ ಎಡವಟ್ಟುಗಳಿಂದ ಮುಖಭಂಗಕ್ಕೂ ಒಳಗಾಗಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಅಲ್ಲಿನ ಪತ್ರಕರ್ತ ಹಮೀದ್ ಮೀರ್.
ಬಲೂಚಿಸ್ತಾನದ ವಿದ್ಯಾರ್ಥಿಯೊಬ್ಬನಿಗೆ ಪಾಕ್ ಸೈನಿಕರು ಮನಸೋ ಇಚ್ಛೆ ಅಮಾನುಷವಾಗಿ ಬಡಿಯುತ್ತಿರುವ ದೃಶ್ಯವನ್ನು ಈತ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಆದರೆ ನಿಜಾಂಶವನ್ನು ತಿರುಚಿ, ಭಾರತೀಯ ಯೋಧರು ಕಾಶ್ಮೀರಿಗನಿಗೆ ಹೊಡೆಯುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
‘ಕಾಶ್ಮೀರದಲ್ಲಿನ ಚಿತ್ರಹಿಂಸೆ ನೋಡಿ, ಯಾರು ಅದನ್ನು ಮಾಡುತ್ತಿದ್ದಾರೆ ಎಂಬುದನ್ನು ನೋಡಿ, ಭಾರತ ಪಾಕ್ನೊಂದಿಗೆ ಯಾಕೆ ಮಾತುಕತೆಗೆ ಮುಂದಾಗುತ್ತಿಲ್ಲ ಎಂಬುದು ಇದರಿಂದ ತಿಳಿದು ಬರುತ್ತದೆ. ಈ ಕ್ರೌರ್ಯವನ್ನು ಪಾಕ್ ಪ್ರಶ್ನೆ ಮಾಡಲಿದೆ’ ಎಂದು ಟ್ವಿಟ್ ಮಾಡಿದ್ದಾನೆ. ಈತನ ಟ್ವಿಟ್ 9,500 ಬಾರಿ ರಿಟ್ವಿಟ್ ಆಗಿದೆ.
ಆದರೆ ಈ ವೀಡಿಯೋದ ಸತ್ಯಾಸತ್ಯತೆಯನ್ನು ಹಾಕ್ಸ್ಸ್ಲೇಯರ್ ಜಾಲತಾಣ ಬಯಲಿಗೆಳೆದಿದ್ದು, ಬಲೂಚಿಸ್ತಾನದ ವಿದ್ಯಾರ್ಥಿಗೆ ಪಾಕ್ ಯೋಧರು ನೀಡುತ್ತಿರುವ ಚಿತ್ರ ಹಿಂಸೆ ಎಂದು ಬಯಲಾಗಿದೆ.
ಶೇರ್ ಅಹ್ಮದ್ ಭುಕ್ತಿ ಎಂಬ ಬಲೂಚಿಸ್ಥಾನ ಹೋರಾಟಗಾರ ಜುಲೈನಲ್ಲೇ ಈ ವೀಡಿಯೋವನ್ನು ಟ್ವಿಟ್ ಮಾಡಿ, ಪಾಕ್ ವಿರುದ್ಧ ಕ್ರಮಕೈಗೊಳ್ಳುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದ್ದರು. ಆ ವೀಡಿಯೋವನ್ನು ಹಮೀದ್ ಮಿರ್ ಭಾರತೀಯ ಯೋಧರ ಮೇಲೆ ಗೂಬೆ ಕೂರಿಸಲು ದುರ್ಬಳಕೆ ಮಾಡಿಕೊಂಡಿದ್ದಾನೆ.
Look at this torture in Kashmir and see who is making this torture?One can understand that why India is not ready for talks with Pakistan?Yes Pakistan will definitely ask about this torture pic.twitter.com/C0nlj0MZP4
— Hamid Mir (@HamidMirPAK) September 21, 2018
Please Have a glance: inhuman and degrading treatment of cruel #PakArmy physical torture of innocent #Baloch student. Plz, act trough, General Assembly resolution 39/46 of 10 December 1984. in accordance with article 27 (1) @unhcr @hrw @UN @UNHumanRights pic.twitter.com/d3bjyNAEf3
— Sher Mohammad Bugti (@SherM_BRP) July 4, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.