ಕಣ್ಣೂರು: ಇಸ್ರೇಲ್ ಪೊಲೀಸರು ಧರಿಸುವ ತಿಳಿ ನೀಲಿ, ಉದ್ದ ತೋಳಿನ ಸಮವಸ್ತ್ರ ಅಷ್ಟೊಂದು ಆಕರ್ಷಕ, ಗೌರವಪೂರ್ಣವಾಗಿರುವ ಹಿಂದಿನ ಕಾರಣ ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಗೊಳಿಸುತ್ತದೆ. ಯಾಕೆಂದರೆ ಆ ಸಮವಸ್ತ್ರ ತಯಾರಾಗುವುದು ಕೇರಳದ ಕಣ್ಣೂರಿನಲ್ಲಿ.
ಹೌದು ನಮ್ಮ ಕೇರಳದಲ್ಲೇ ಇಸ್ರೇಲಿ ಪೊಲೀಸರು ಧರಿಸುವ ಸಮವಸ್ತ್ರ ತಯಾರಾಗುತ್ತದೆ. ತೋಡುಪುಳ ಮೂಲದ ಉದ್ಯಮಿ ಥೋಮಸ್ ಒಲಿಕ್ಕಲ್ ಅವರಿಗೆ ಸೇರಿದ ಮರಿಯನ್ ಅಪ್ಯಾರಲ್ ಪ್ರೈವೇಟ್ ಲಿಮಿಟೆಡ್ ಈ ಸಮವಸ್ತ್ರಗಳನ್ನು ಹೊಲಿದು ಕೊಡುತ್ತದೆ.
ಈ ಸಂಸ್ಥೆ ಟೆಕ್ಸ್ಟೈಲ್ ಎಕ್ಸ್ಪೋರ್ಟ್ ಮತ್ತು ಕೈಮಗ್ಗದಲ್ಲಿ ಅಮೋಘ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ನೂರಾರು ಟೈಲರ್ಗಳು ಇಸ್ರೇಲಿ ಪಡೆಗಳಿಗೆ ಬಟ್ಟೆ ತಯಾರಿಸಿಕೊಡುತ್ತಾರೆ.
ವಲಿಯವೆಲಿಚಮ್ ಜಿಲ್ಲೆಯ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಡಬಲ್ ಪಾಕೆಟ್ ಶರ್ಟ್ ಮಾತ್ರವಲ್ಲ, ಸಮವಸ್ತ್ರದ ಕೈಗಳ ಮೇಲೆ ಟ್ರೇಡ್ಮಾರ್ಕ್ ಎಂಬ್ಲಂನ್ನೂ ಅಟ್ಯಾಚ್ ಮಾಡುತ್ತದೆ.
ಕಳೆದ 3 ವರ್ಷಗಳಿಂದ ವಾರ್ಷಿಕ 1 ಲಕ್ಷ ಶರ್ಟ್ಗಳನ್ನು ಈ ಸಂಸ್ಥೆ ಇಸ್ರೇಲ್ನ ಮಹಿಳಾ ಮತ್ತು ಪುರುಷ ಪೊಲೀಸರಿಗೆ ಕಳುಹಿಸಿಕೊಟ್ಟಿದೆ.
ಕುವೈಟ್ನ ಫೈಯರ್ ಸರ್ವಿಸ್ ಮತ್ತು ನ್ಯಾಷನಲ್ ಗಾರ್ಡ್ ಮುಖೇನ ಈ ಸಂಸ್ಥೆ ಸಮವಸ್ತ್ರ ಪೂರೈಕೆ ಮಾಡುವ ಆರ್ಡರ್ ಪಡೆದುಕೊಂಡಿದೆ. ಈ ಹಿಂದೆ ಟ್ರೋಸರ್ಸ್ನ್ನು ಇದು ಕಳುಹಿಸಿಕೊಡುತ್ತಿತ್ತು, ಆದರೀಗ ಆ ಆರ್ಡರ್ ಚೀನಾ ಸಂಸ್ಥೆಗೆ ಸಿಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.