ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿ, ಮೊತ್ತ ಮೊದಲ ಅಂಡರ್ಗ್ರೌಂಡ್ ಮೆಟ್ರೋ ಪ್ರಾಜೆಕ್ಟ್ನ್ನು ಹೊಂದಲು ಸರ್ವ ಸನ್ನದ್ಧವಾಗಿದೆ. ಈ ಪ್ರಾಜೆಕ್ಟ್ಗೆ 1.26 ಕಿಮೀ ಉದ್ದದ ಸುರಂಗ ಕೊರೆಯುವ ಕಾರ್ಯ ಸೋಮವಾರ ಅಂತ್ಯಗೊಂಡಿದೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ, ‘ಟನಲ್ ಬೋರಿಂಗ್ ಮೆಶಿನ್ ‘ವೈನ್ಗಂಗಾ-1’ ಸಿಎಸ್ಎಂಐಎ-ಟರ್ಮಿನಲ್ 2 ಸ್ಟೇಶನ್ನಲ್ಲಿ ಕೊನೆಯ ಸುರಂಗವನ್ನು ಕೊರೆಯಲಾಯಿತು. ಇಲ್ಲಿಗೆ ಸುರಂಗ ಕೊರೆಯುವ ಕಾರ್ಯ ಸಮಾಪ್ತಿಯಾಗಿದೆ.
ಈ ಮೆಟ್ರೋ ಪ್ರಾಜೆಕ್ಟ್, ಮುಂಬಯಿಗರ ಟ್ರಾಫಿಕ್ ಜಂಜಾಟವನ್ನು ತಗ್ಗಿಸಲಿದೆ ಮತ್ತು ಪ್ರಯಾಣದ ಸಮಯವನ್ನೂ ಕಡಿತಗೊಳಿಸಲಿದೆ.
ಅಂಡರ್ಗ್ರೌಂಡ್ ಮೆಟ್ರೋ ಅಂಧೇರಿಯ ಮರೋಲ್ ಗ್ರಾಮದ ಮುನ್ಸಿಪಲ್ ಪಾಲಿ ಗ್ರೌಂಡ್ನಿಂದ ಆರಂಭಗೊಂಡು, ಛತ್ರಪತಿ ಶಿವಾಜಿ ಮಹಾರಾಜ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಟರ್ಮಿನಲ್-2 ಸ್ಟೇಶನ್ವರೆಗೆ ಮುಂದುವರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.