ಶ್ರೀನಗರ: ಪಾಕಿಸ್ಥಾನದ ವಿರುದ್ಧ ನಡೆದ ಸರ್ಜಿಕಲ್ ಸ್ಟ್ರೈಕ್ನಲ್ಲಿ ಪರಾಕ್ರಮ ಮೆರೆದ ಯೋಧರಲ್ಲಿ ಒರ್ವರಾಗಿದ್ದ ಲ್ಯಾನ್ಸ್ ನಾಯ್ಕ್ ಸಂದೀಪ್ ಸಿಂಗ್ ಅವರು, ಸೋಮವಾರ ಜಮ್ಮು ಕಾಶ್ಮೀರದ ತಂಗ್ದರ್ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ.
ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸಂದೀಪ್ ಸಿಂಗ್ ಅವರ ದೇಹದೊಳಕ್ಕೆ ಹಲವಾರು ಗುಂಡು ಹೊಕ್ಕಿದ್ದವು, ಆದರೂ ಅವರು ಹೋರಾಟವನ್ನು ಮುಂದುವರೆಸಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಇಂದು ಗುರುದಾಸ್ಪುರದಲ್ಲಿ ಅವರು ಹುತಾತ್ಮರಾಗಿದ್ದಾರೆ.
ತಂಗ್ದರ್ ಸೆಕ್ಟರ್ನ 4 ಪ್ಯಾರಾ ಕಮಾಂಡೋಸ್ನ ಪ್ರಮುಖ ಕಮಾಂಡೋ ಆಗಿದ್ದು, ಅವರ ತಂಡ ಉಗ್ರರ ಚಟುವಟಿಕೆಯನ್ನು ಪತ್ತೆ ಹಚ್ಚಿದ ತಕ್ಷಣ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ ಅವರು, ಹೋರಾಟಕ್ಕೆ ಧುಮುಕಿದರು. ಭಾನುವಾರ ಮೂರು ಉಗ್ರರನ್ನು ಇವರು ನೆಲಕ್ಕುರುಳಿಸಿದ್ದರು. ಗುಂಡು ದೇಹವನ್ನು ಸೀಳಿದ್ದರೂ ಅವರು ಉಗ್ರರ ವಿರುದ್ಧದ ಹೋರಾಟವನ್ನು ಮುಂದುವರೆಸಿದ್ದರು.
ಸಂದೀಪ್ ಸಿಂಗ್ ಅವರು 5 ವರ್ಷದ ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.