ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಆಸ್ಟ್ರೇಲಿಯಾದ ಸಮೀಪ ಸಿಲುಕಿ ಹಾಕಿಕೊಂಡಿದ್ದ ಭಾರತದ ನೌಕಾಧಿಕಾರಿ ಮತ್ತು ಗೋಲ್ಡನ್ ಗ್ಲೋಬ್ ರೇಸ್ ಸ್ಕಿಪ್ಪರ್ ಕಮಾಂಡರ್ ಅಭಿಲಾಷ್ ಟೋಮಿ ಅವರ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ ಫ್ರಾನ್ಸ್ ಮತ್ತು ಆಸ್ಟ್ರೇಲಿಯಾಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಟ್ವಿಟ್ ಮಾಡಿರುವ ರಾಷ್ಟ್ರಪತಿ, ‘ದಕ್ಷಿಣ ಹಿಂದೂ ಮಹಾಸಾಗರದಿಂದ ಭಾರತೀಯ ನೌಕಾ ಕಮಾಂಡರ್ ಅಭಿಲಾಷ್ ಟೋಮಿ ಅವರನ್ನು ರಕ್ಷಣೆ ಮಾಡಲಾಗಿದೆ. ಈ ಧೈರ್ಯಶಾಲಿಯನ್ನು ತಲುಪುವಲ್ಲಿ, ಸಲಹೆ ನೀಡುವಲ್ಲಿ ಸಹಾಯ ಮಾಡಿದ ಫ್ರೆಂಚ್ ಮತ್ತು ಆಸ್ಟ್ರೇಲಿಯಾದ ಮಿತ್ರರಿಗೆ ಧನ್ಯವಾದಗಳು. ಆತನ ಶೀಘ್ರ ಗುಣಮುಖಕ್ಕೆ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
ದೇಶೀ ನಿರ್ಮಿತ ಸೈಲಿಂಗ್ ವಿಸ್ಸೆಲ್ ‘ತುರಿಯಾ’ದ ಮೂಲಕ ‘ಗೋಲ್ಡನ್ ಗ್ಲೋಬ್ ರೇಸ್ 2018’ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಕಮಾಂಡರ್ ಟೋಮಿ ಅವರು, ಸಮುದ್ರ ವಾತಾವರಣ, ಪ್ರತಿಕೂಲ ಹವಮಾನದ ಕಾರಣದಿಂದ ಬೆನ್ನು ನೋವಿಗೆ ತುತ್ತಾಗಿ ಹಿಂದೂ ಮಹಾಸಾಗರದಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಅವರನ್ನು ಫ್ರೆಂಚ್ ಮೀನುಗಾರಿಕ ಹಡಗು ಒಸಿರಿಸಿ ಮೂಲಕ ರಕ್ಷಣೆ ಮಾಡಲಾಗಿತ್ತು.
ಗೋಲ್ಡನ್ ಗ್ಲೋಬ್ ರೇಸ್ ವೆಬ್ಸೈಟ್ನಲ್ಲಿನ ಮಾಹಿತಿಯಂತೆ, ಟೋಮಿ ಸದ್ಯಕ್ಕೆ ಅಮ್ಸ್ಟರ್ಡ್ಯಾಮ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೋಲ್ಡನ್ ಗ್ಲೋಬ್ ರೇಸ್ ಎಂದರೆ ಜಗತ್ತಿನಾದ್ಯಂತ ನೌಕಾ ಯಾನ ನಡೆಸುವುದು. ಟೋಮಿ ಅವರು ಲೆಜೆಂಡರಿ ನೌಕೆ ಐಎನ್ಎಸ್ವಿ ಮಧಿ ಮೂಲಕ ನಾನ್ ಸ್ಟಾಪ್ ಆಗಿ ನೌಕಾಯಾನ ನಡೆಸಿದ ಏಕೈಕ ಭಾರತೀಯನಾಗಿದ್ದಾರೆ.
Source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.