ನವದೆಹಲಿ: ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ‘ನೋಬೆಲ್ ಶಾಂತಿ ಪುರಸ್ಕಾರ’ಕ್ಕೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ತಮಿಳಿಸಾಯ್ ಸುಂದರಾಜನ್ ಅವರು ನಾಮನಿರ್ದೇಶನಗೊಳಿಸಿದ್ದಾರೆ.
ಅಷ್ಟೇ ಅಲ್ಲದೇ ಆಕೆಯ ಪತಿ, ಖಾಸಗಿ ವಿಶ್ವವಿದ್ಯಾಲಯದ ನೆಪ್ರೋಲಜಿ ಹಿರಿಯ ಸಲಹೆಗಾರ ಮತ್ತು ಇಲಾಖೆ ಮುಖ್ಯಸ್ಥ ಡಾ.ಸುಂದರ್ರಾಜನ್ ಅವರೂ ಮೋದಿ ಹೆಸರನ್ನು ನಾಮನಿರ್ದೇಶನಗೊಳಿಸಿದ್ದಾರೆ.
ಈ ಬಗ್ಗೆ ಪ್ರಕಟನೆ ಹೊರಡಿಸಿರುವ ತಮಿಳುನಾಡು ಬಿಜೆಪಿ ಘಟಕ, ‘ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ‘ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ‘ನೋಬೆಲ್ ಶಾಂತಿ ಪುರಸ್ಕಾರ’ 2019ಕ್ಕೆ ನಾಮನಿರ್ದೇಶನಗೊಳಿಸಲಾಗಿದೆ’ ಎಂದಿದೆ.
ದೂರದೃಷ್ಟಿಯುಳ್ಳ ಪ್ರಧಾನಿಯ ಈ ಮಹತ್ವದ ಯೋಜನೆ ದೇಶದ ಕೋಟ್ಯಾಂತರ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದಿದೆ.
Source: Hindutan Times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.