ನವದೆಹಲಿ: ಭಾರತ ಭಾನುವಾರ ರಾತ್ರಿ ಇಂಟರ್ಸೆಪ್ಟರ್ ಮಿಸೈಲ್ ಪರೀಕ್ಷೆಯನ್ನು ಓರಿಸ್ಸಾ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಿದೆ. ಈ ಮೂಲಕ 2 ಲೇಯರ್ಗಳ ಬ್ಯಾಲಿಸ್ಟಿಕ್ ಮಿಸೈಲ್ ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಈ ಹಿಂದೆ ವ್ಹೀಲರ್ ದ್ವೀಪ ಎಂದು ಕರೆಯಲ್ಪಡುತ್ತಿದ್ದ ಈಗಿನ ಅಬ್ದುಲ್ ಕಲಾಂ ದ್ವೀಪದ ಇಂಟಿಗ್ರೇಟೆಡ್ ಟೆಸ್ಟ ರೇಂಜ್ನಲ್ಲಿ ರಾತ್ರಿ 8.05ರ ಸುಮಾರಿಗೆ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಭೂವಾತಾವರಣದಿಂದ 50 ಕಿಲೋಮೀಟರ್ ಎತ್ತರದಲ್ಲಿನ ಎಕ್ಸೋ-ಅಟ್ಮಾಸ್ಪೀಯರ್ ಭಾಗದಲ್ಲಿ ಟಾರ್ಗೆಟ್ ಮಾಡಲು ಈ ಪೃಥ್ವಿ ಡಿಫೆನ್ಸ್ ವೆಹಿಕಲ್(PDV)ನ್ನು ನಡೆಸಲಾಗಿದೆ ಎಂದು DRDO ಹೇಳಿದೆ. PDV ಇಂಟರ್ಸೆಪ್ಟರ್ ಮತ್ತು ಟಾರ್ಗೆಟ್ ಮಿಸೈಲ್ ಎರಡೂ ಯಶಸ್ವಿಯಾಗಿದೆ ಎಂದು DRDO ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.