ಟೆಲ್ಚರ್(ಒರಿಸ್ಸಾ): ಶನಿವಾರ ಬೆಳಿಗ್ಗೆ ಒರಿಸ್ಸಾದ ಟೆಲ್ಚರ್ಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ವಾಗತಿಸಿದರು. ಟೆಲ್ಚರ್ನಲ್ಲಿನ ಅಂಗನವಾಡಿ ಕಾರ್ಯಕರ್ತರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಒರಿಸ್ಸಾದಲ್ಲಿ ಟೆಲ್ಚರ್ ಗೊಬ್ಬರ ಘಟಕದ ಉದ್ಘಾಟನೆಯನ್ನು ಮಾಡಿದ್ದಾರೆ.
ಟೆಲ್ಚರ್ ಗೊಬ್ಬರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಈ ಗೊಬ್ಬರದ ಘಟಕ ನೈಸರ್ಗಿಕ ಅನಿಲವನ್ನು ಉತ್ಪಾದಿಸಲಿದೆ ಮತ್ತು ದೇಶಕ್ಕೆ ಬೇಕಾಗಿರುವ ಇಂಧನ ಶಕ್ತಿಯ ಅವಶ್ಯಕತೆಗೆ ಪೂರಕವಾಗಲಿದೆ ಎಂದು ಹೇಳಿದ್ದಾರೆ. ಒರಿಸ್ಸಾ ವಿಮಾನ ನಿಲ್ದಾಣ ದೇಶದ ವಾಯು ನಕ್ಷೆಯಲ್ಲಿ ಸೇರಿಕೊಳ್ಳಲಿದ್ದು ಸರ್ಕಾರದ ‘ಉಡಾನ್’ ಯೋಜನೆಯ ಮೂಲಕ ಪ್ರಾದೇಶಿಕ ವಾಯು ಸಂಪರ್ಕವನ್ನು ಸಾಧಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.