ಶ್ರೀನಗರ: ಶೀಘ್ರದಲ್ಲೇ ಭೂ ಲೋಕದ ಸ್ವರ್ಗ ಜಮ್ಮು ಕಾಶ್ಮೀರ ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಸ್ಟೇಡಿಯಂನ್ನು ಪಡೆಯಲಿದೆ.
ಇಲ್ಲಿನ ರಾಜಧಾನಿ ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ನ್ಯಾಷನಲ್ ಪ್ರಾಜೆಕ್ಟ್ಸ್ ಕನ್ಸ್ಟ್ರಕ್ಷನ್ ಕಾರ್ಪೋರೇಶನ್ ರೂ.50 ಕೋಟಿ ಬಜೆಟ್ನಲ್ಲಿ ಈ ಫುಟ್ಬಾಲ್ ಸ್ಟೇಡಿಯಂ ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಇದರ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಇಂಟರ್ನ್ಯಾಷನಲ್ ಫುಟ್ಬಾಲ್ ಪ್ರೀಮಿಯರ್ ಲೀಗ್ ಮತ್ತು ಟೂರ್ನಮೆಂಟ್ಗಳು ಇಲ್ಲಿ ಜರುಗಲಿವೆ. ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರರನ್ನು ಹೊರಹೊಮ್ಮಿಸುವುದು, ಉತ್ತಮ ಕೋಚಿಂಗ್ ಸಿಗುವಂತೆ ಮಾಡುವುದು ಈ ಸ್ಟೇಡಿಯಂನ ಉದ್ದೇಶವಾಗಿದೆ.
ಫಿಫಾದ ನಿಯಮಗಳಂತೆ ಇದರ ನಿರ್ಮಾಣವಾಗುತ್ತಿದ್ದು, ಫುಡ್ ಕೋರ್ಟ್, ಶೌಚಾಲಯ ಸೇರಿದಂತೆ ಆರು ಬ್ಲಾಕ್ಗಳನ್ನು ಇದು ಒಳಗೊಳ್ಳಲಿದೆ. ಕಮೆಂಟರಿ ಬಾಕ್ಸ್, ವಿವಿಐಪಿ ಬಾಕ್ಸ್, ಡ್ರೆಸ್ಸಿಂಗ್ ಹಾಲ್ನ್ನು ಒಳಗೊಂಡ ಪೆವಿಲಿಯನ್ ಇದು ಒಳಗೊಂಡಿದೆ.
ಮೈದಾನ ಸಿಂಥೆಟಿಕ್ ಟರ್ಫ್ನ್ನು ಹೊಂದಿರಲಿದ್ದು, 4 ಫೋಲ್ಡ್ಲೈಟ್ಸ್ ಇರಲಿದೆ. ಏಕಕಾಲಕ್ಕೆ 18 ಸಾವಿರ ಮಂದಿಗೆ ಪಂದ್ಯ ವೀಕ್ಷಿಸಲು ಆಸನ ವ್ಯವಸ್ಥೆ ಇದೆ.
Source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.