ನವದೆಹಲಿ: ಸೆ.29ರಂದು ‘ಸರ್ಜಿಕಲ್ ಸ್ಟ್ರೈಕ್ ಡೇ’ಯನ್ನು ಆಚರಿಸುವಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ, ಕಾಲೇಜುಗಳಿಗೆ ಯುಜಿಸಿ ನಿರ್ದೇಶನ ನೀಡಿದೆ.
ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಅವರು ಈ ಬಗ್ಗೆ ಎಲ್ಲಾ ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳಿಗೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಈ ದಿನ ಕಾಲೇಜುಗಳಲ್ಲಿ ವಿಶೇಷ ಪರೇಡ್, ಮಾಜಿ ಯೋಧರಗಳಿಂದ ಭಾಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದ್ದಾರೆ.
ಸೇನೆಯ ಬಗ್ಗೆ ಪ್ರದರ್ಶನ, ಪತ್ರ ಬರೆಯುವಿಕೆ, ಕಾರ್ಡ್ ರಚನೆ, ವಿದ್ಯಾರ್ಥಿಗಳಿಂದ ಸೇನೆಯ ಗೌರವದ ಬಗ್ಗೆ ಪ್ರತಿಜ್ಞೆ ಇತ್ಯಾದಿಗಳನ್ನು ಮಾಡಿಸುವಂತೆಯೂ ತಿಳಿಸಲಾಗಿದೆ.
2016ರ ಸೆ.29ರಂದು ಭಾರತದ ಯೋಧರು ಪಾಕಿಸ್ಥಾನದ ಗಡಿಯೊಳಗೆ ನುಗಿ ಅಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ಮಿಂಚಿನ ದಾಳಿಯನ್ನು ನಡೆಸಿದ್ದರು. ಇದು ಸೇನೆಯ ಅತ್ಯಂತ ಪರಾಕ್ರಮದ ಸಾಹಸಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ.
ಇದೀಗ ಕೇಂದ್ರ ಸರ್ಕಾರ ಈ ಐತಿಹಾಸಿಕ ಘಟನೆಯ ದಿನಾಚರಣೆಯನ್ನು ನಡೆಸಲು ನಿರ್ಧರಿಸಿದೆ.
Source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.