ನವದೆಹಲಿ: 2005-6 ಮತ್ತು 2015-16 ಅವಧಿಯಲ್ಲಿ ಭಾರತದಲ್ಲಿ ಬಹು ಆಯಾಮದ ಬಡತನ ಶೇ54.7ರಿಂದ ಶೇ 27.5ಕ್ಕೆ ಕುಗ್ಗಿದೆ ಎಂದು 2018ರ ಜಾಗತಿಕ ಬಹು ಆಯಾಮ ಬಡತನ ಸೂಚ್ಯಾಂಕ(ಎಂಪಿಐ) ಹೇಳಿದೆ. 10 ವರ್ಷಗಳಲ್ಲಿ 271 ಮಿಲಿಯನ್ ಭಾರತೀಯರು ಬಡತನದಿಂದ ಹೊರ ಬಂದಿದ್ದಾರೆ ಎಂಬುದನ್ನು ಇದು ತಿಳಿಸಿದೆ.
2005-6 ಮತ್ತು 2015-16 ಅವಧಿಯಲ್ಲಿ ಭಾರತದ ಸುಮಾರು 271 ಮಿಲಿಯನ್ ಜನರು ಬಡತನದಿಂದ ಹೊರಕ್ಕೆ ಬಂದಿದ್ದಾರೆ. 10 ವರ್ಷದ ಅವಧಿಯಲ್ಲಿ ಬಡತನದ ಪ್ರಮಾಣ ಅರ್ಧದಷ್ಟು ಕುಸಿತವಾಗಿದೆ. ಶೇ.55ರಿಂದ ಶೇ.28ರವರೆಗೆ ಇಳಿಮುಖವಾಗಿದೆ’ ಎಂದು ಎಂಪಿಐ ವರದಿ ಹೇಳಿದೆ.
ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ), ಆಕ್ಸ್ಪರ್ಡ್ ಪವರ್ಟಿ ಮತ್ತು ಮಾನವ ಅಭಿವೃದ್ಧಿ ಕಾರ್ಯಕ್ರಮ(ಒಪಿಎಚ್ಐ) ಈ ಸೂಚ್ಯಾಂಕವನ್ನು ಬಿಡುಗಡೆಗೊಳಿಸಿದೆ.
ನೇಪಾಳ, ಬಾಂಗ್ಲಾದೇಶ, ಪಾಕಿಸ್ಥಾನಗಳಲ್ಲಿ ಬಹು ಆಯಾಮದ ಬಡತನ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಸೂಚ್ಯಾಂಕದಿಂದ ತಿಳಿದುಬಂದಿದೆ.
ಭಾರತದ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಝಾರ್ಖಂಡ್ಗಳಲ್ಲಿ ಬಹು ಆಯಾಮ ಬಡತನದಲ್ಲಿರುವವರ ಸಂಖ್ಯೆ ಹೆಚ್ಚಿದೆ. ಸುಮಾರು 119 ಮಿಲಿಯನ್ ಬಡವರು ಇಲ್ಲಿದ್ದಾರೆ. ಅಂದರೆ ಭಾರತದ ಒಟ್ಟು ಬಹು ಆಯಾಮ ಬಡತನದಲ್ಲಿರುವವರ ಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ಇದೇ ರಾಜ್ಯಗಳಲ್ಲಿ ಇದ್ದಾರೆ ಎಂದು ವರದಿ ಹೇಳಿದೆ.
Source: Hindustan Times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.