ನವದೆಹಲಿ: ದೇಶದಲ್ಲಿ ಮಹಿಳಾ ಸುರಕ್ಷತೆಯನ್ನು ಬಲಿಷ್ಠಗೊಳಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಎರಡು ಪ್ರತ್ಯೇಕ ಪೋರ್ಟಲ್ಗಳಿಗೆ ಚಾಲನೆಯನ್ನು ನೀಡಿದ್ದಾರೆ.
ಪೋರ್ಟಲ್- cybercrime.gov.in -ನಾಗರಿಕರಿಂದ ಮಕ್ಕಳ ನೀಲಿಚಿತ್ರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ರೇಪ್, ಗ್ಯಾಂಗ್ ರೇಪ್ ಇತ್ಯಾದಿ ಆಕ್ಷೇಪಾರ್ಹ ಆನ್ಲೈನ್ ಕಂಟೆಂಟ್ಗಳ ಬಗ್ಗೆ ದೂರುಗಳನ್ನು ಸ್ವೀಕರಿಸಲಿದೆ.
ಮತ್ತೊಂದು ನ್ಯಾಷನಲ್ ಡಾಟಾಬೇಸ್ ಆನ್ ಸೆಕ್ಸುವಲ್ ಅಫೆಂಡರ್(NDSO”>NDSO),-ಇದು ಕೇಲವೊಂದು ಏಜೆನ್ಸಿಗಳ ಬಳಕೆಗೆ ಮಾತ್ರ ಇದೆ, ಲೈಂಗಿಕ ಅಪರಾಧಿಗಳ ಬಗೆಗಿನ ತನಿಖೆ ಮತ್ತು ಪತ್ತೆ ಹಚ್ಚುವಿಕೆಯ ಬಗ್ಗೆ ಏಜೆನ್ಸಿಗಳಿಗೆ ಇದು ಮಾಹಿತಿ ನೀಡಲಿದೆ.
ಈ ಎರಡು ಪೋರ್ಟಲ್ಗಳು ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಪ್ರಯೋಜನಕಾರಿಯಾಗಲಿದೆ ಎಂದಿರುವ ರಾಜನಾಥ್ ಸಿಂಗ್, ಮಹಿಳೆ ಮತ್ತು ಮಕ್ಕಳ ವಿರುದ್ಧ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಎಲ್ಲಾ ಸರ್ಕಾರಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
Source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.