ವಾಷಿಂಗ್ಟನ್: ಅಮೆರಿಕಾದ ತನ್ನ ವಾರ್ಷಿಕ ‘ಭಯೋತ್ಪಾದನಾ ವರದಿ’ಯಲ್ಲಿ ಭಾರತದ ಭಯೋತ್ಪಾದನೆಯ ವಿರುದ್ಧ ಕೈಗೊಳ್ಳುತ್ತಿರುವ ಕ್ರಮಗಳಿಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದೆ.
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ತನ್ನ ‘ಕಂಟ್ರಿ ರಿಪೋರ್ಟ್ ಆನ್ ಟೆರರಿಸಂ’ನಲ್ಲಿ ಭಾರತದಲ್ಲಿ ಹಮ್ಮಿಕೊಳ್ಳುತ್ತಿರುವ ಭಯೋತ್ಪಾದನಾ ಕಾರ್ಯಚರಣೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದೆ, ಮಾತ್ರವಲ್ಲ ಪಾಕಿಸ್ಥಾನ ಮೂಲಕ ಭಯೋತ್ಪಾದನಾ ಸಂಘಟನೆಗಳು ದೇಶದ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದೆ ಎಂದು ಉಲ್ಲೇಖ ಮಾಡಿದೆ.
ದೇಶೀಯವಾಗಿ ಭಯೋತ್ಪಾದನಾ ದಾಳಿಯನ್ನು ತಡೆಯುವ ಬಗ್ಗೆ ಭಾರತದ ನಾಯಕತ್ವ ಸ್ಪಷ್ಟವಾಗಿದೆ, ಯುಎಸ್ ಮತ್ತು ಇತರ ಸಮಾನ ಮನಸ್ಕ ದೇಶಗಳೊಂದಿಗೆ ಸೇರಿ ಉಗ್ರರನ್ನು ದಮನಿಸಲು ಬದ್ಧವಾಗಿದೆ ಎಂದಿದೆ.
2017ರಲ್ಲಿ ಜಮ್ಮು ಕಾಶ್ಮೀರ, ಈಶಾನ್ಯದ ರಾಜ್ಯಗಳಲ್ಲಿ ನಡೆದ ದಾಳಿಗಳ ಬಗ್ಗೆ ಭಾರತ ಗಂಭೀರವಾಗಿದೆ. ಪಾಕ್ ಭಯೋತ್ಪಾದಕರು ಅದಕ್ಕೆ ಸವಾಲುಗಳನ್ನು ಒಡ್ಡುತ್ತಲೇ ಇದ್ದಾರೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.