ನವದೆಹಲಿ: ‘ನ್ಯಾಷನಲ್ ನಾಲೆಡ್ಜ್ ನೆಟ್ವರ್ಕ್’ ಕಾರ್ಯಕ್ರಮದ ಮೂಲಕ ಯುದ್ಧ ಪೀಡಿತ ಅಫ್ಘಾನಿಸ್ಥಾನದಲ್ಲಿನ ಶೈಕ್ಷಣಿಕ ಸಂಸ್ಥೆಗಳನ್ನು ಹೈ ಸ್ಪೀಡ್ ಇಂಟರ್ನೆಟ್ಗೆ ಕನೆಕ್ಟ್ ಮಾಡಲು ಭಾರತ ಬಯಸುತ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಭಾರತ ಭೇಟಿಯಲ್ಲಿರುವ ಅಫ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ ಅವರಿಗೆ ಆಯೋಜಿಸಲಾದ ಔತನಕೂಟದಲ್ಲಿ ಪಾಲ್ಗೊಂಡ ವೇಳೆ ಅವರು ಈ ಬಗ್ಗೆ ಹೇಳಿದ್ದಾರೆ.
‘ನಮ್ಮಲ್ಲಿ ನ್ಯಾಷನಲ್ ನಾಲೆಡ್ಜ್ ನೆಟ್ವರ್ಕ್ ಇದೆ. ಈ ಮೂಲಕ ನಾವು ಭಾರತದ 1668 ಯೂನಿವರ್ಸಿಟಿಗಳನ್ನು ಶೈಕ್ಷಣಿಕ ಸಂಸ್ಥೆಗಳನ್ನು ಹೈ ಸ್ಪೀಡ್ ಇಂಟರ್ನೆಟ್ಗೆ ಕನೆಕ್ಟ್ ಮಾಡಿದ್ದೇವೆ. ನ್ಯಾಷನಲ್ ನಾಲೆಡ್ಜ್ ನೆಟ್ವರ್ಕ್ನ್ನು ಅಫ್ಘಾನ್ ದೇಶಕ್ಕೂ ತರಲು ನಾವು ಬಯಸಿದ್ದೇವೆ’ ಎಂದರು.
ಭಾರತದ ಇತರ ಯೋಜನೆಗಳಾ ಇ-ಹಾಸ್ಪಿಟಲ್, ಇ-ಸ್ಕಾಲರ್ಶಿಪ್, ಡಿಜಿಟಲ್ ಸಾಕ್ಷರತೆಗಳನ್ನು ಅಪ್ಘಾನ್ಗೂ ವಿಸ್ತರಿಸಬಹುದಾಗಿದೆ ಎಂದರು.
Source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.