ಭುವನೇಶ್ವರ: ಅಕ್ರಮ ವಲಸಿಗರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಒರಿಸ್ಸಾ, ವೋಟಲ್ ಲಿಸ್ಟ್ನಲ್ಲಿದ್ದ ಹಲವಾರು ಅಕ್ರಮ ಬಾಂಗ್ಲಾದೇಶಿ ವಲಸಿಗರ ಹೆಸರನ್ನು ತೆಗೆದು ಹಾಕಿದೆ.
ಒರಿಸ್ಸಾದ ಕೇಂದ್ರಾಪರ ಜಿಲ್ಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸಿದ್ದು, ಸುಮಾರು 137 ಅಕ್ರಮ ವಲಸಿಗರು ಮತದಾರರ ಪಟ್ಟಿಯಲ್ಲಿದ್ದುದು ಬೆಳಕಿಗೆ ಬಂದಿದೆ. ಅವರ ಹೆಸರನ್ನು ಸದ್ಯ ತೆಗೆದು ಹಾಕಲಾಗಿದೆ.
ಕೇಂದ್ರಾಪರದ ಜಿಲ್ಲಾಧಿಕಾರಿ ದಶರಥಿ ಸತ್ಪಥಿ ಅವರ ಆದೇಶದ ಮೇರೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿತ್ತು. ಈ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಅಕ್ರಮ ವಲಸಿಗರು ಇರುವುದು ಪತ್ತೆಯಾಗಿದೆ.
ಇಡೀ ಒರಿಸ್ಸಾ ರಾಜ್ಯದಲ್ಲಿ 4ಸಾವಿರ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ಇದ್ದಾರೆ ಎನ್ನಲಾಗಿದ್ದು, ಕೇಂದ್ರಪರ ಹೊರತುಪಡಿಸಿದರೆ, ಪರದೀಪ್ ಮತ್ತು ಜಗತ್ಸಿಂಗ್ ಪುರದಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.
Source: Swarajya
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.