ಬೆಂಗಳೂರು: ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ ವರ್ಷದೊಳಗೆ ಬೆಳಗಾವಿ ಅಧಿವೇಶನ ನಡೆದಿತ್ತು. ಇದೀಗ ಜೂ.೨೯ರಿಂದ ನಡೆಯಲಿರುವ ಅಧಿವೇಶನವನ್ನು ಬೆಂಗಳೂರು, ಬೆಳಗಾವಿ ಎರಡು ಕಡೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹತ್ತು ದಿನಗಳ ಕಾಲ ನಡೆಯುವ ಈ ಅಧಿವೇಶನವನ್ನು ಬೆಳಗಾವಿಯಲ್ಲಿ ಜೂ. 29ರಿಂದ ಜು.10ರ ವರೆಗೆ ಹಾಗೂ ಬೆಂಗಳೂರಿನಲ್ಲಿ ಜು.13ರಿಂದ 24ರ ವರೆಗೆ ನಡೆಸಲು ನಿರ್ಧರಿಸಿದೆ.
ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಬೀದರ್ನಲ್ಲಿ ವರ್ತುಲ ರಸ್ತೆ, ಹುಮ್ನಾಬಾದ್ ಗೇಟ್ನಿಂದ ಮನ್ನಾ ಅಖೇಲಿ, ಶಹಾಪುರ ಗೇಟ್ನಿಂದ ಬಾಲ್ಕಿ ಗೇಟ್ವರೆಗೆ ಒಟ್ಟು 50 ಕೋ.ರೂ. ಅಭಿವೃದ್ಧಿ, ಸಕಲೇಶಪುರ ತಾಲೂಕು ಹತ್ತೂರಿನಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯಿಂದ ಬೀದರ್ ವಿಮಾನ ನಿಲ್ದಾಣ ಕಾಮಗಾರಿಗೆ ಅನುಮೋದನೆ ಮತ್ತಿತರ ಕಾಮಗಾರಿಗಳ ಬಗ್ಗೆ ಅಧಿವೇಶನದಲ್ಲಿ ನಿರ್ಣಯಿಸಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.