ನವದೆಹಲಿ: INSV ತಾರಿಣಿ ಮೂಲಕ ವಿಶ್ವ ನೌಕಾ ಯಾನ ನಡೆಸಿದ ನೌಕಾ ಪಡೆಯ ಆರು ಮಹಿಳಾ ಸಿಬ್ಬಂದಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ‘ತೆಂಝಿಂಗ್ ನೋರ್ಗೆ’ ಅವಾರ್ಡ್ಗಳನ್ನು ನೀಡಿ ಪುರಸ್ಕರಿಸಿದ್ದಾರೆ.
ಭೂಮಿ, ಸಮುದ್ರ ಮತ್ತು ಆಗಸದಲ್ಲಿ ಅಪ್ರತಿಮ ಸಾಹಸವನ್ನು ತೋರಿದವರಿಗೆ ಕೊಡುವ ರಾಷ್ಟ್ರೀಯ ಮನ್ನಣೆ ಈ ಪ್ರಶಸ್ತಿಯಾಗಿದೆ. ಪುರುಷ ಪ್ರಧಾನ ನೌಕಾ ಪಡೆಯಲ್ಲಿ ಇದ್ದು, ವಿಶ್ವವನ್ನೇ ನೌಕೆಯ ಮೂಲಕ ಪರ್ಯಟನೆ ಮಾಡಿ ಅಪ್ರತಿಮ ಸಾಹಸವನ್ನು ಈ ತಂಡ ಮಾಡಿತ್ತು.
ಲೆ.ಕಮಾಂಡರ್ ವರ್ತಿಕಾ ಜೋಶಿ, ಲೆ.ಕ ಪ್ರತಿಭಾ ಜಮ್ವಾಲ್, ಪಿ.ಸ್ವಾತಿ, ಲೆ.ಎಸ್ ವಿಜಯ ದೇವಿ, ಬಿ ಐಶ್ವರ್ಯ, ಪಾಯಲ್ ಗುಪ್ತಾ ಈ ತಂಡದಲ್ಲಿದ್ದು, 254 ದಿನಗಳ ಕಾಲ 22,000 ನಾಟಿಕಲ್ ಮೈಲಿಗಳನ್ನು ಕ್ರಮಿಸಿ, ಆಸ್ಟ್ರೇಲಿಯಾ,, ನ್ಯೂಜಿಲ್ಯಾಂಡ್, ಫಾಲ್ಕ್ಲ್ಯಾಂಡ್, ಐಸ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಮಾರಿಶಿಯಸ್ಗಳಿಗೆ ಭೇಟಿ ಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.