ನ್ಯೂಯಾರ್ಕ್: ಜನಿಸಿದ ಮಗುವಿನಿಂದ ಹಿಡಿದು 5 ವರ್ಷಗಳವರೆಗೆ ಮಕ್ಕಳ ಮರಣ ಪ್ರಮಾಣ ಅಧಿಕವಾಗಿರುತ್ತದೆ. ವಿವಿಧ ಬಗೆಯ ಕಾಯಿಲೆಗಳು, ಕಳಪೆ ವೈದ್ಯಕೀಯ ಸೇವೆಗಳು ಇದಕ್ಕೆ ಕಾರಣವಾಗುತ್ತದೆ. ಆದರೆ ಕಳೆದ 5 ವರ್ಷಗಳಿಂದ ಭಾರತದ ವೈದ್ಯಕೀಯ ವಲಯದಲ್ಲಿ ಸಾಕಷ್ಟು ಸುಧಾರಣೆಗಳಾಗುತ್ತಿವೆ, ಇದರ ಪರಿಣಾಮವಾಗಿ ಶಿಶುಗಳ ಮರಣ ಪ್ರಮಾಣದಲ್ಲಿ ಶೇ.4ರಷ್ಟು ಕಡಿಮೆಯಾಗಿದೆ.
ವಿಶ್ವಸಂಸ್ಥೆಯ ವರದಿಯ ಪ್ರಕಾರ, 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಭಾರತದಲ್ಲಿ ಕಡಿಮೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಸಾವಿನ ಪ್ರಮಾಣ ಒಂದು ಮಿಲಿಯನ್ ಗೆರೆಗಿಂತ ಕಡಿಮೆಯಾಗಿದೆ.
ಕಳೆದ ಐದು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲೂ ಮಕ್ಕಳ ಮರಣ ಪ್ರಮಾಣ ಕಡಿಮೆಯಾಗಿದೆ, ಅದಕ್ಕೆ ಅನುಸಾರವಾಗಿ ಭಾರತದಲ್ಲೂ ಕಡಿಮೆಯಾಗುತ್ತಾ ಸಾಗಿದೆ.
ವರದಿಯ ಪ್ರಕಾರ, ತುರ್ತು ವೈದ್ಯಕೀಯ ಕ್ರಮ ಕೈಗೊಳ್ಳದಿದ್ದರೆ, 2030ರವರೆಗೆ ಜಾಗತಿಕವಾಗಿ 5 ವರ್ಷದೊಳಗಿನ 56 ಮಿಲಿಯನ್ ಮಕ್ಕಳು ಸಾಯುವ ಸಂಭಾವ್ಯತೆ ಇದೆ. ಇದರಲ್ಲಿ ಅರ್ಧದಷ್ಟು ನವಜಾತ ಶಿಶುಗಳಾಗಿರಲಿವೆ.
Source: News Bharati
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.