ಅಗರ್ತಲಾ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಗರ್ತಲಾದಲ್ಲಿ ಸ್ಥಾಪನೆಗೊಂಡಿರುವ ಇಸ್ರೋದ ಮೊದಲ ಸ್ಪೇಸ್ ಟೆಕ್ನಾಲಜಿ ಇನ್ಕ್ಯುಬೇಶನ್ ಸೆಂಟರ್ನ್ನು ಮಂಗಳವಾರ ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್ ಲೋಕಾರ್ಪಣೆಗೊಳಿಸಿದರು.
ಬೆಂಗಳೂರಿನಲ್ಲಿ ಇಂಡಿಯನ್ ಎಲೆಕ್ಟ್ರಾನಿಕ್ಸ್ ಆಂಡ್ ಸೆಮಿಕಂಡಕ್ಟರ್ ಅಸೋಸಿಯೇಶನ್ ಆಯೋಜನೆಗೊಳಿಸಿದ್ದ ‘ಸ್ಪೇಸ್ಟ್ರಾನಿಕ್ಸ್’ನಲ್ಲಿ ವೀಡಿಯೋ ಕಾನ್ಫರೆನ್ಸ್ ಮತ್ತು ರಿಮೋಟ್ ಮೂಲಕ ಎನ್ಐಟಿ ಅಗರ್ತಲಾದಲ್ಲಿನ ಇಸ್ರೋ ಟೆಕ್ನಾಲಜಿ ಇನ್ಕ್ಯುಬೇಶನ್ ಸೆಂಟರ್ಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ.ಸಿವನ್, ‘ಅಪ್ಲಿಕೇಶನ್, ಸರ್ವಿಸ್, ಪ್ರೊಡಕ್ಟ್ಗಳನ್ನು ನಿರ್ಮಾಣ ಮಾಡುವಂತಹ, ಆಫರ್ ಮಾಡುವಂತಹ ಸ್ಟಾರ್ಟ್ ಅಪ್ಗಳನ್ನು ಬೆಳೆಸುವತ್ತ ನಾವು ಎದುರು ನೋಡುತ್ತಿದ್ದೇವೆ’ ಎಂದರು.
’ಭಾರತದಲ್ಲಿ ಅಪಾರ ಪ್ರತಿಭೆಗಳಿವೆ, ಅಗರ್ತಲಾದ ಇನ್ಕ್ಯುಬೇಶನ್ ಸೆಂಟರ್ ಮೂಲಕ ನಾವು ಬಾಹ್ಯಾಕಾಶ ಸಂಬಂಧಿತ ಸಂಶೋಧನೆಗಳಿಗೆ, ಸ್ಟಾರ್ಟ್ ಅಪ್ಗಳಿಗೆ ಅಪಾರ ಅವಕಾಶಗಳನ್ನು ನೀಡುತ್ತಿದ್ದೇವೆ’ ಎಂದರು.
ಬಿಪ್ಲವ್ ದೇವ್ ಮಾತನಾಡಿ, ’ಸಂಶೋಧನೆ, ಆವಿಷ್ಕಾರ, ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ ತ್ರಿಪುರಾ ಭಾರತದ ತಂತ್ರಜ್ಞಾನಿಕ ಮ್ಯಾಪ್ನಲ್ಲಿ ಪ್ರಮುಖ ಸ್ಥಾನ ಪಡೆಯುವತ್ತ ದಾಪುಗಾಲು ಇಡುತ್ತಿದ್ದೇವೆ’ ಎಂದಿದ್ದಾರೆ.
Source: The Indian Express
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.