ಧಾಕಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಮಂಗಳವಾರ ಉಭಯ ದೇಶಗಳ ನಡುವಣ ಫ್ರೆಂಡ್ಶಿಪ್ ಪೈಪ್ಲೈನ್ ಯೋಜನೆ ಕಾಮಗಾರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆಯನ್ನು ನೀಡಿದರು.
130 ಕಿಲೋಮೀಟರ್ ಉದ್ದದ ಈ ಭಾರತ-ಬಾಂಗ್ಲಾದೇಶ ಫ್ರೆಂಡ್ಶಿಪ್ ಪೈಪ್ಲೈನ್ ಪ್ರಾಜೆಕ್ಟ್, ಪಶ್ಚಿಮಬಂಗಾಳದ ಸಿಲಿಗುರಿ ಮತ್ತು ಬಾಂಗ್ಲಾದ ಪರ್ಬತಿಪುರವನ್ನು ಸಂಪರ್ಕಿಸಲಿದೆ.
ರೂ.346 ಕೋಟಿ ಮೊತ್ತದ ಈ ಯೋಜನೆ ಇನ್ನು 30 ತಿಂಗಳುಗಳಲ್ಲಿ ಸಂಪೂರ್ಣಗೊಳ್ಳಲಿದೆ. ವಾರ್ಷಿಕ ಒಂದು ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯ ಈ ಪೈಪ್ಲೈನ್ಗೆ ಇರಲಿದೆ.
ಕಳೆದ ಎಪ್ರಿಲ್ನಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಢಾಕಾಗೆ ತೆರಳಿದ್ದ ವೇಳೆ ಈ ಪೈಪ್ಲೈನ್ ಒಪ್ಪಂದ ಅಂತಿಮಗೊಂಡಿತ್ತು.
‘ಉಭಯ ದೇಶಗಳ ನಡುವಣ ಬಾಂಧವ್ಯ ಜಗತ್ತಿಗೆ ಮಾದರಿಯಾಗಿದೆ. ಈ ಪೈಪ್ಲೈನ್ ಯೋಜನೆ ಕೇವಲ ಬಾಂಗ್ಲಾದ ಆರ್ಥಿಕತೆಯನ್ನು ಸುಧಾರಣೆ ಮಾಡುವುದಿಲ್ಲ, ಉಭಯ ದೇಶಗಳ ನಡುವಣ ಸ್ನೇಹಕ್ಕೆ ಹೊಸ ಚೈತನ್ಯವನ್ನೂ ನೀಡುತ್ತದೆ’ ಎಂದು ಮೋದಿ ಅಭಿಪ್ರಾಯಿಸಿದ್ದಾರೆ.
Source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.