ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ವಾರಣಾಸಿಗೆ ತೆರಳಿ, ಕಾಶಿ ವಿಶ್ವನಾಥನ ದರ್ಶನವನ್ನು ಪಡೆದುಕೊಂಡರು. ಬಳಿಕ ಅವರು ಶಾಲಾ ಮಕ್ಕಳೊಂದಿಗೆ ಮತ್ತು 75 ಸ್ಲಂ ಮಕ್ಕಳೊಂದಿಗೆ ಸಂವಾದ ನಡೆಸಿದರು. 200 ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಭೇಟಿಯಾದರು.
ಮಂಗಳವಾರ ಕೂಡ ಅವರು ವಾರಣಾಸಿಯಲ್ಲೇ ಇರಲಿದ್ದು, ಸಾರ್ವಜನಿಕ ಸಮಾವೇಶವನ್ನು ಆಯೋಜಿಸಲಿದ್ದಾರೆ. ಸುಮಾರು ರೂ.500 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಉಡುಗೊರೆಯಾಗಿ ಜನರಿಗೆ ನೀಡಲಿದ್ದಾರೆ. ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಆಂಪಿಥಿಯೇಟರ್ನಲ್ಲಿ ಮೋದಿ ಕಾರ್ಯಕ್ರಮ ಜರುಗಲಿದೆ.
ಕಾಶಿಯಲ್ಲಿ ಐಪಿಡಿಎಸ್ ಅಂಡರ್ಗ್ರೌಂಡ್ ಕೇಬಲ್ ವರ್ಕ್ ಯೋಜನೆ, 3,722ಗ್ರಾಮಗಳ ವಿದ್ಯುದೀಕರಣ, ಮೀಟರ್ ಅಳವಡಿಕೆ, ದತ್ತು ಪಡೆದ ನಾಗೇಪುರ್ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ, ಎರಡು ಪವರ್ ಸಬ್ಸ್ಟೇಶನ್ಗಳನ್ನು ಮೋದಿ ಇಂದು ಅನಾವರಣಗೊಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.