ಅಲ್ಮೋರಾ: ಭಾರತ ಮತ್ತು ಅಮೆರಿಕಾ ಸೇನೆಗಳ ನಡುವಣ ಜಂಟಿ ಸಮರಾಭ್ಯಾಸ ‘ಯುದ್ಧ್ ಅಭ್ಯಾಸ್ 2018’ಗೆ ಭಾನುವಾರ ಉತ್ತರಾಖಂಡದ ಚೌಬತ್ತಿಯದ ತಪ್ಪಲಿನಲ್ಲಿ ಚಾಲನೆ ದೊರೆತಿದೆ.
ಭಾರತದ ಕಾಂಗೋ ಬ್ರಿಗೇಡ್ನ ಇನ್ಫಾಂಟ್ರಿ ಬೆಟಾಲಿಯನ್, ಗರುಡ ಡಿವಿಜನ್, ಸೂರ್ಯ ಕಮಾಂಡ್, ಸೆಂಟ್ರಲ್ ಕಮಾಂಡ್ ‘ಯುದ್ಧ್ ಅಭ್ಯಾಸ್’ನಲ್ಲಿ ಭಾರತವನ್ನು ಪ್ರತಿನಿಧಿಸಿವೆ. ಅಮೆರಿಕಾದ 23 ಇನ್ಫಾಂಟ್ರಿ ರಿಜಿಮೆಂಟ್, 2 ಸ್ಟ್ರೈಕರ್ ಬ್ರಿಗೇಡ್ ಕಂಬಾತ್ ಟೀಮ್, 7 ಇನ್ಫಾಂಟ್ರಿ ಡಿವಿಜನ್ ಭಾಗವಹಿಸಿವೆ.
ಕಣ್ಗಾವಲು ಉಪಕರಣ, ಪತ್ತೆ ಹಚ್ಚುವಿಕೆ ಉಪಕರಣ, ಉಗ್ರರೊಂದಿಗೆ ಸಮೀಪದಲ್ಲಿ ಹೋರಾಡಲು ಬಳಸುವ ವಿಶೇಷ ಶಸ್ತ್ರಾಸ್ತ್ರ, ಸ್ಫೋಟಕ ಮತ್ತು ಸ್ಫೋಟಕ ಪತ್ತೆ ಡಿವೈಸ್, ಅತ್ಯಾಧುನಿಕ ಸಂವಹನ ಪರಿಕರಗಳನ್ನು ಸಮರಾಭ್ಯಾಸದ ವೇಳೆ ಉಭಯ ದೇಶಗಳು ಫೀಲ್ಡ್ಗೆ ಇಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.