ಶ್ರೀಹರಿಕೋಟಾ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆ 2019ರ ಜನವರಿ 3ರಂದು ಜರುಗುವ ಸಾಧ್ಯತೆ ಇದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ.
ದಕ್ಷಿಣ ಧ್ರುವದ ಸಮೀಪ ಸಾಗುವ ವಿಶ್ವದ ಮೊತ್ತ ಮೊದಲ ಯೋಜನೆ ಚಂದ್ರಯಾನ-2 ಆಗಲಿದೆ.
ಪಿಎಸ್ಎಲ್ವಿ ಸಿ-42ನ್ನು ಭೂಕಕ್ಷೆಗೆ ಯಶಸ್ವಿಯಾಗಿ ಉಡಾವಣೆಗೊಳಿಸಿದ ಬಗ್ಗೆ ಮಾತನಾಡಿದ ಸಿವನ್, ಅಂತಾರಾಷ್ಟ್ರೀಯ ಸೆಟ್ಲೈಟ್ಗಳಾದ NovaSAR and S1-4 earth observation satellitesನ್ನು ನಿಗದಿಯಂತೆ ಭೂಕಕ್ಷೆಗೆ ಸೇರಿಸಿ ಸಂತೋಷಗೊಂಡಿದ್ದೇವೆ ಎಂದರು.
ಮುಂದಿನ 3 ತಿಂಗಳುಗಳ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದ ಅವರು, ಚಂದ್ರಯಾನ-2 2019ರ ಜನವರಿ 3ರಿಂದ ಫೆಬ್ರವರಿ 16ರೊಳಗೆ ನಡೆಸಲು ಯೋಜಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.