ಮುಂಬಯಿ: ಕೇಂದ್ರ ಸರ್ಕಾರ 2014ರಲ್ಲಿ ಆರಂಭಿಸಿದ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಉದ್ಯಮಿ ರತನ್ ಟಾಟಾ ಅವರ ನೇತೃತ್ವದ ಟಾಟಾ ಟ್ರಸ್ಟ್ ಇದುವರೆಗೆ ಬರೋಬ್ಬರಿ ರೂ.100 ಕೋಟಿಗಳನ್ನು ವ್ಯಯಿಸಿದೆ.
ಟಾಟಾ ಟ್ರಸ್ಟ್ ಮುಖ್ಯಸ್ಥ ರತನ್ ಟಾಟಾ ಅವರೇ, ಸ್ವಚ್ಛತಾ ಹೀ ಸೇವಾ ಅಭಿಯಾನದ ಚಾಲನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಈ ಮಾಹಿತಿಯನ್ನು ನೀಡಿದ್ದಾರೆ.
ನಾಗರಿಕರ ಆರೋಗ್ಯದ ಮೇಲೆ ದೇಶದ ಬಲಿಷ್ಠತೆ ಅವಲಂಬಿತವಾಗಿದೆ ಎಂದಿರುವ ಅವರು, ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ಸದಾ ಕೈಜೋಡಿಸುತ್ತೇವೆ ಎಂದರು.
‘ದೇಶದ ಅಡಿಪಾಯ ಜನರ ಆರೋಗ್ಯದ ಮೇಲೆ ನಿಂತಿದೆ, ಸ್ವಚ್ಛತೆ ಇಲ್ಲದೆ, ನೈರ್ಮಲ್ಯವಿಲ್ಲದೆ, ಶುದ್ಧ ಕುಡಿಯುವ ನೀರು ಇಲ್ಲದೆ ಆರೋಗ್ಯ ಇಲ್ಲ’ ಎಂದರು.
100 ವರ್ಷಗಳ ಅಸ್ತಿತ್ವವನ್ನು ಹೊಂದಿರುವ ಟಾಟಾ ಟ್ರಸ್ಟ್ ದೇಶದ ಸ್ವಚ್ಛತೆಗೆ ರೂ.100 ಕೋಟಿಗಳನ್ನು ವ್ಯಯಿಸಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.