ಫ್ಲೋರಿಡಾ: ಚಂದ್ರನನ್ನು ದೂರದಲ್ಲೇ ನೋಡಿ ಆನಂದಿಸುವ ನಮಗೆಲ್ಲಾ ಫ್ಲೋರಿಡಾದ ಸ್ಪೇಸ್ ಎಕ್ಸ್ ಎಂಬ ಸಂಸ್ಥೆ ವಿಶೇಷ ಆಫರ್ವೊಂದನ್ನು ನೀಡಿದೆ. ಚಂದ್ರನಲ್ಲಿಗೆ ಪ್ರವಾಸಕ್ಕೆ ತೆರಳುವ ಆಫರ್ ಇದಾಗಿದೆ.
ಅಮೆರಿಕಾದ ಏರೋಸ್ಪೇಸ್ ಉತ್ಪಾದಕ ಸಂಸ್ಥೆಯಾಗ ಸ್ಪೇಸ್ ಎಕ್ಸ್, ಬಿಗ್ ಫಾಲ್ಕನ್ ರಾಕೆಟ್ ಬಳಸಿ ಜನರನ್ನು ಚಂದ್ರನಲ್ಲಿಗೆ ಪ್ರವಾಸ ಕರೆದುಕೊಂಡು ಹೋಗುವ ಘೋಷಣೆ ಮಾಡಿದೆ. ಹಣ ವ್ಯಯಿಸಲು ಹಿಂದೆ ಮುಂದೆ ನೋಡದವರು ಇದರ ಸದುದ್ದೇಶವನ್ನು ಪಡೆದುಕೊಳ್ಳಬಹುದಾಗಿದೆ.
ಬಿಗ್ ಫಾಲ್ಕನ್ ರಾಕೆಟ್ ಭಾರೀ ಉಡಾವಣಾ ವಾಹನವಾಗಿದ್ದು, ಜನರನ್ನು ಬಾಹ್ಯಾಕಾಶಕ್ಕೆ ಸಾಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಿಶ್ವದಲ್ಲಿ ಮೊದಲ ಬಾರಿಗೆ ಖಾಸಗಿ ಪ್ರಯಾಣಿಕರನ್ನು ಚಂದ್ರನ ಸುತ್ತ ಬಿಗ್ ಫಾಲ್ಕನ್ ರಾಕೆಟ್ನಲ್ಲಿ ಕರೆದೊಯ್ಯಲು ಸ್ಪೇಸ್ ಎಕ್ಸ್ ಒಪ್ಪಂದ ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.