ನವದೆಹಲಿ: ಜಗತ್ತಿನ ಕುಟುಂಬ ಒಡೆತನದ ಉದ್ಯಮಗಳ ಪೈಕಿ ಭಾರತಕ್ಕೆ 3ನೇ ಸ್ಥಾನ ಲಭಿಸಿದೆ. ನಮ್ಮ ದೇಶದ 111 ಕಂಪನಿಗಳು ಕುಟುಂಬದ ಒಡೆತನದಲ್ಲಿವೆ. ಇವುಗಳ ಮಾರುಕಟ್ಟೆ ಮೌಲ್ಯ 839 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಕ್ರೆಡಿಟ್ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, ‘ಕ್ರೆಡಿಟ್ ಸ್ಯೂಸ್ ಫ್ಯಾಮಿಲಿ 1000 ಇನ್ 2018’ ವರದಿಯಲ್ಲಿ ಈ ವಿವರಗಳಿವೆ.
ಮೊದಲ ಸ್ಥಾನದಲ್ಲಿ ಚೀನಾ ಇದ್ದು, ಇಲ್ಲಿಯ 159 ಕಂಪನಿಗಳು ಕುಟುಂಬ ಒಡೆತನದ್ದಾಗಿವೆ. ಎರಡನೇ ಸ್ಥಾನದಲ್ಲಿ ಅಮೆರಿಕಾ ಇದ್ದು, ಇಲ್ಲಿಯ 121 ಕಂಪನಿಗಳು ಕುಟುಂಬ ಒಡೆತನದ್ದಾಗಿವೆ. ಕೊರಿಯಾ ನಾಲ್ಕು ಮತ್ತು ಇಂಡೋನೇಷ್ಯಾ 5ನೇ ಸ್ಥಾನದಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.