ನವದೆಹಲಿ: ‘ಎಂಜಿನಿಯರ್ಸ್ ಡೇ’ ಪ್ರಯುಕ್ತ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ಪರಿಶ್ರಮಿ ಎಂಜಿನಿಯರ್ಗಳಿಗೂ ಶುಭ ಕೋರಿದ್ದಾರೆ.
ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆ.15ರಂದು ಪ್ರತಿವರ್ಷ ದೇಶದಲ್ಲಿ ಎಂಜಿನಿಯರ್ಸ್ ಡೇಯನ್ನು ಆಚರಿಸಲಾಗುತ್ತದೆ.
ಟ್ವಿಟ್ ಮಾಡಿರುವ ಮೋದಿ, ‘ಎಂಜಿನಿಯರ್ಸ್ ಡೇ ಪ್ರಯುಕ್ತ ದೇಶದ ಪ್ರತಿಯೊಬ್ಬ ಪರಿಶ್ರಮಿ ಎಂಜಿನಿಯರ್ಗಳನ್ನು ಅಭಿನಂದಿಸುತ್ತೇನೆ. ಅವರ ದಕ್ಷತೆ ಮತ್ತು ಸಮರ್ಪಣಾ ಭಾವಕ್ಕೆ ನಮ್ಮ ಶ್ಲಾಘನೆ. ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆ ಮಹತ್ತರವಾದುದು. ಶ್ರೇಷ್ಠ ಎಂಜಿನಿಯರ್ ಎಸ್ ಎಂ ವಿಶ್ವೇಶ್ವರಯ್ಯನವರಿಗೆ ಜನ್ಮ ದಿನ ಪ್ರಯುಕ್ತ ನಮನಗಳನ್ನು ಸಲ್ಲಿಸುತ್ತೇನೆ’ ಎಂದರು.
ಇಂಟರ್ನೆಟ್ ದಿಗ್ಗಜ ಗೂಗಲ್ ಕೂಡ ವಿಭಿನ್ನದ ಡೂಡಲ್ನ್ನು ರಚಿಸಿ ವಿಶ್ವೇಶ್ವರಯ್ಯನವರಿಗೆ ಗೌರವ ಸಮರ್ಪಣೆ ಮಾಡಿದೆ.
Engineers Day is observed in the memory of the most celebrated engineer of India, Bharat Ratna Shri Mokshagundam Visvesvaraya ji. My sincere tribute to him on his birth anniversary and greetings to all engineers who have transformed the country with their innovation #EngineersDay pic.twitter.com/GnalVy6Dck
— Narendra Modi’s Fan (@iShankarGurjar) September 15, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.