ನವದೆಹಲಿ: ಫ್ರಾನ್ಸ್ ಕಂಪನಿಯಿಂದ 126 ರಫೆಲ್ ಜೆಟ್ಗಳನ್ನು ಖರೀದಿ ಮಾಡುವ ಸಲುವಾಗಿನ ಮಾತುಕತೆ ಯುಪಿಎ ಅವಧಿಯಲ್ಲಿ ಯಾಕೆ ವಿಫಲಗೊಂಡಿತು ಎಂಬುದನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರಿಸಿದ್ದಾರೆ.
ಯುಪಿಎ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಎಚ್ಎಎಲ್ಗೆ ಫ್ರೆಂಚ್ ಕಂಪನಿ ಡಸಾಲ್ಟ್ ಆವಿಯೇಶನ್ ಸಹಭಾಗಿತ್ವದೊಂದಿಗೆ ರಫೆಲ್ ಜೆಟ್ನ್ನು ತಯಾರಿಸುವ ಅತ್ಯಗತ್ಯ ಸಾಮರ್ಥ್ಯ ಇರಲಿಲ್ಲ ಎಂದು ಸಚಿವೆ ಹೇಳಿದ್ದಾರೆ.
ಅಲ್ಲದೇ, 2013ರಲ್ಲಿ ವೆಚ್ಚ ಸಮಾಲೋಚನಾ ಸಮಿತಿಯು ರಫೆಲ್ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದ ವೇಳೆ ಅಂದಿನ ರಕ್ಷಣಾ ಸಚಿವ ಎಕೆ ಆಂಟೋನಿಯವರು ಮಧ್ಯಪ್ರವೇಶ ಮಾಡಿ ಎಲ್ಲವನ್ನೂ ಬಿಗಡಾಯಿಸಿದರು ಎಂದಿದ್ದಾರೆ.
ಎಚ್ಎಎಲ್ನೊಂದಿಗೆ ಹಲವಾರು ಸುತ್ತಿನ ಮಾತುಕತೆಯನ್ನು ನಡೆಸಿದ ಬಳಿಕ ಡಿಸಾಲ್ಟ್ ಸಂಸ್ಥೆ, ಭಾರತದಲ್ಲಿ ರಫೆಲ್ ಜೆಟ್ ತಯಾರು ಮಾಡಿದರೆ ಅದಕ್ಕೆ ತಗಲುವ ವೆಚ್ಚ ಇನ್ನಷ್ಟು ಏರಿಕೆಯಾಗಲಿದೆ ಎಂದು ಭಾವಿಸಿತು. ಅಲ್ಲದೇ ಎಚ್ಎಎಲ್ ತಾನು ಉತ್ಪಾದಿಸಿದ ರಫೆಲ್ ಜೆಟ್ಗೆ ಗ್ಯಾರಂಟಿ ನೀಡುವ ಸ್ಥಿತಿಯಲ್ಲಿರಲಿಲ್ಲ, ಆದರೆ ವಾಯುಸೇನೆಗೆ ಗ್ಯಾರಂಟಿ ಅತ್ಯಗತ್ಯವಾಗಿತ್ತು ಎಂದು ಸೀತಾರಾಮನ್ ಹೇಳಿದ್ದಾರೆ.
ಎಚ್ಎಎಲ್ನ್ನು ರಫೆಲ್ ಡೀಲ್ನೊಳಗೆ ಯಾಕೆ ಒಳಪಡಿಸಲಿಲ್ಲ ಎಂಬ ಕಾಂಗ್ರೆಸ್ಸಿಗರ ಪ್ರಶ್ನೆಗೆ ಅವರು ಈ ಉತ್ತರವನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.