ನವದೆಹಲಿ: ದೆಹಲಿ ಯೂನಿವರ್ಟಿಟಿ ಸ್ಟುಡೆಂಟ್ ಯೂನಿಯನ್(ಡಿಯುಎಸ್ಯು) ಚುನಾವಣೆಗಳ ಫಲಿತಾಂಶ ಗುರುವಾರ ಸಂಜೆ ಪ್ರಕಟಗೊಂಡಿದ್ದು, ಎಬಿವಿಪಿ ಅಧ್ಯಕ್ಷ ಸ್ಥಾನ ಸೇರಿದಂತೆ ಪ್ರಮುಖ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಎನ್ಎಸ್ಯುಐ ಕೇವಲ ಒಂದು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಡಿಯುಎಸ್ಯು ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ, ಜಂಟಿ ಕಾರ್ಯದರ್ಶಿ ಸ್ಥಾನಗಳನ್ನು ಪಡೆಯುವಲ್ಲಿ ಎಬಿವಿಪಿ ಯಶಸ್ವಿಯಾಗಿದೆ. ಕಾರ್ಯದರ್ಶಿ ಸ್ಥಾನ ಎನ್ಎಸ್ಯುಐ ಪಾಲಾಗಿದೆ.
20,467 ಮತಗಳನ್ನು ಪಡೆದ ಎಬಿವಿಪಿಯ ಅಂಕಿವ್ ಬಸೊಯ ಡಿಯುಎಸ್ಯುನ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಎನ್ಎಸ್ಯುಐನ ಸನ್ನಿಯನ್ನು ಇವರು 1,744 ಮತಗಳಿಂದ ಸೋಲಿಸಿದ್ದಾರೆ.
ಎಬಿವಿಪಿಯ ಶಕ್ತಿ ಸಿಂಗ್ ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜ್ಯೋತಿ ಚೌಧುರಿ ಜಂಟಿ ಕಾರ್ಯದರ್ಶಿ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸಿದ್ಧಾಂತಗಳ ವಿಚಾರವಾಗಿ ಆಗಾಗ ಸುದ್ದಿಗೆ ಗ್ರಾಸವಾಗುವ ದೆಹಲಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಮಹತ್ತರ ಗೆಲುವನ್ನು ಸಾಧಿಸಿದ್ದು ಅದರ ಮಾತೃ ಪಕ್ಷ ಬಿಜೆಪಿಗೆ ಸಂತೋಷ ತಂದಿತ್ತಿದೆ. ಕಾಂಗ್ರೆಸ್ಗೆ ಇದು ನುಂಗಲಾರದ ತುತ್ತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.