ಚಂಡೀಗಢ: ಬೀದಿ ಬದಿಯಲ್ಲಿ ಅಡ್ಡಾಡುತ್ತಿರುವ ಪ್ರಾಣಿಗಳಿಂದ ಬೇಸತ್ತು ಹೋಗಿರುವ ಚಂಡೀಗಢ ಮಹಾನಗರ ಪಾಲಿಕೆ, ಪ್ರಾಣಿಗಳನ್ನು ಬೀದಿಗೆ ಬಿಟ್ಟವರ ಮೇಲೆ ವಿಧಿಸಲಾಗುತ್ತಿರುವ ದಂಡದಲ್ಲಿ 7 ಪಟ್ಟು ಹೆಚ್ಚಳ ಮಾಡಿದೆ.
ದನ, ಎತ್ತು ಅಥವಾ ಕೋಣಗಳನ್ನು ಬೀದಿಗೆ ಬಿಡುವವರ ಮೇಲೆ ವಿಧಿಸಲಾಗುತ್ತಿದ್ದ ರೂ.3000 ದಂಡವನ್ನು ರೂ.20 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಇಷ್ಟೇ ಅಲ್ಲದೇ ಅವುಗಳ ಮೇವಿನ ಖರ್ಚಿಯಾಗಿ ದಿನಕ್ಕೆ ರೂ.500ರಂತೆ ಮಾಲೀಕರು ತೆರಬೇಕಾಗುತ್ತದೆ.
ಕುರಿ, ಮೇಕೆ, ಆಡುಗಳನ್ನು ಬೀದಿಗೆ ಬಿಟ್ಟರೆ ರೂ.1,400 ದಂಡ ತೆರಬೇಕಾಗುತ್ತದೆ. ಪ್ರಸ್ತುತ ರೂ.700 ದಂಡ ವಿಧಿಸಲಾಗುತ್ತಿದೆ. ಕುದುರೆ, ಹಂದಿ, ಕೋತಿ ಮುಂತಾದುವುಗಳನ್ನು ಬೀದಿಗೆ ಬಿಟ್ಟರೆ ರೂ.400 ದಂಡ ವಿಧಿಸಬೇಕು. ಪ್ರಸ್ತುತ ಇದಕ್ಕೆ ರೂ.2000 ದಂಡ ವಿಧಿಸಲಾಗುತ್ತಿದೆ. ಇನ್ನಿತರ ಯಾವುದೇ ಪ್ರಾಣಿಗಳನ್ನೂ ಬೀದಿಗೆ ಬಿಟ್ಟರೆ ರೂ.4000ದವರೆಗೆ ದಂಡ ವಿಧಿಸಬೇಕಾಗುತ್ತದೆ.
ಪ್ರಾಣಿಗಳನ್ನು ಅದರ ಮಾಲೀಕರು ಬೇಕಾಬಿಟ್ಟಿಯಾಗಿ ಬೀದಿಗೆ ಬಿಡುವುದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿದೆ, ಈ ಹಿನ್ನಲೆಯಲ್ಲಿ ದಂಡವನ್ನು 7 ಪಟ್ಟು ಹೆಚ್ಚಳ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.