ಲೂಧಿಯಾನ: ಅರ್ಥವತ್ತಾದ ಉದ್ದೇಶದೊಂದಿಗೆ ಲೂಧಿಯಾನದ ಬೇಕರಿಯೊಂದು 40 ಕೆಜಿ ತೂಕದ ಚಾಕೊಲೇಟ್ ಗಣಪನನ್ನು ರಚಿಸಿದೆ. ಈ ಗಣಪನಿಗೆ ಪೂಜಾ ಕೈಂಕರ್ಯಗಳನ್ನು ನಡೆಸಿದ ಬಳಿಕ ಹಾಲಿನಲ್ಲಿ ವಿಸರ್ಜಿನೆಗೊಳಿಸಲು ನಿರ್ಧರಿಸಲಾಗಿದೆ. ವಿಸರ್ಜನೆಗೊಂಡು ಚಾಕೊಲೇಟ್ ಮಿಲ್ಕ್ ಶೇಕ್ ಆಗುವ ಗಣಪ ಬಡ ಮಕ್ಕಳ ಹೊಟ್ಟೆ ತುಂಬಿಸಲಿದ್ದಾನೆ.
ಇದು ಅತ್ಯಂತ ಪರಿಸರ ಸ್ನೇಹಿ ಗಣಪನಾಗಿದ್ದು, ವಿಸರ್ಜನೆಯೂ ಅರ್ಥವತ್ತಾಗಿ ನಡೆಯಲಿದೆ. ಕೆರೆ, ತೊರೆಗಳಲ್ಲಿ ವಿಸರ್ಜನೆಗೊಂಡು ಕರಗುವ ಗಣಪನ ಮೂರ್ತಿಗಳನ್ನು ರಚಿಸುವ ಬದಲು, ಈ ಬೇಕರಿ ಚಾಕೋಲೆಟ್ನಲ್ಲಿ ಗಣಪನನ್ನು ರಚಿಸಿದೆ. ಹಾಲಿನಲ್ಲಿ ವಿಸರ್ಜನೆಯಾದ ಬಳಿಕ ತಯಾರಾಗುವ ಮಿಲ್ಕ್ ಶೇಕ್ನ್ನು ಉಚಿತವಾಗಿ ಬಡ ಮಕ್ಕಳಿಗೆ ಹಂಚಲು ಈ ಬೇಕರಿ ನಿರ್ಧರಿಸಿದೆ.
ಒಂದು ವಾರಗಳಲ್ಲಿ ಈ ಚಾಕೊಲೇಟ್ ಗಣಪನನ್ನು ರಚಿಸಲಾಗಿದೆ. ಬೇಕರಿ ಮಾಲೀಕ ಹರಿಜಿಂದರ್ ಎಸ್ ಕುಕ್ರೇಜಾ ಅವರು ಸದುದ್ದೇಶವನ್ನು ಇಟ್ಟುಕೊಂಡ ಈ ಗಣಪನ ಮೂರ್ತಿಯನ್ನು ತಯಾರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.