ಮುಂಬಯಿ: ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ದಿಟ್ಟವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ಲಾಸ್ಟಿಕ್ ಬ್ಯಾನ್ ಮಾಡಿರುವ ಅದು, ನಿಯಮ ಉಲ್ಲಂಘಿಸಿದವರಿಗೆ ರೂ.150ರಿಂದ ರೂ.500ರವರೆಗೆ ದಂಡವನ್ನೂ ವಿಧಿಸುತ್ತಿದೆ. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಮಹಾ ಸರ್ಕಾರ, ಬಯಲು ಶೌಚ ಮಾಡುವವರಿಗೆ, ಕಸ ಬಿಸಾಕುವವರಿಗೆ, ಊಗಿಯುವವರಿಗೂ ದಂಡ ವಿಧಿಸಲು ಮುಂದಾಗಿದೆ.
ಬಯಲು ಶೌಚ ಮಾಡಿದರೆ ರೂ.500 ರೂಪಾಯಿ ದಂಡ ವಿಧಿಸಲು, ಸಾರ್ವಜನಿಕ ಸ್ಥಳಲ್ಲಿ ಉಗಿಯುವವರಿಗೆ ರೂ.180 ಮತ್ತು ಕಸ ಹಾಕುವವರಿಗೆ ರೂ.120ರವರೆಗೆ ದಂಡ ವಿಧಿಸಲಾಗಿದೆ.
ಅಲ್ಲದೇ ಘನ ತ್ಯಾಜ್ಯ ಮತ್ತು ಹಸಿ ತ್ಯಾಜ್ಯ ವಿಂಗಡನೆ ಮತ್ತು ನಿರ್ವಹಣೆಯಲ್ಲೂ ಶೇ100ರಷ್ಟು ಟಾರ್ಗೆಟ್ ಸಾಧಿಸಬೇಕು ಎಂದು ನಗರಪಾಲಿಕೆಗಳಿಗೆ ಆದೇಶ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.